ಛಾಯಾಚಿತ್ರಗ್ರಾಹಕರ ಹಿತಾಸಕಿಗೆ ಕೈಜೋಡಿಸಿ

ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಆಯೋಜಿಸಿದ್ದ  ಸಂಘದ ಆಸರೆ ಯೋಜನೆಗೆ  ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಚಾಲನೆ ನೀಡಿದರು. ನಿಲೇಶ್, ಮಲ್ಲೇಶ್, ಲೋಕೇಶ್ ಇತರರಿದ್ದರು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಆಯೋಜಿಸಿದ್ದ ಸಂಘದ ಆಸರೆ ಯೋಜನೆಗೆ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಚಾಲನೆ ನೀಡಿದರು. ನಿಲೇಶ್, ಮಲ್ಲೇಶ್, ಲೋಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ಜಿಲ್ಲಾದ್ಯಕ್ಷ ನಿಂಗರಾಜು ಮನವಿ
ಬೇಲೂರು: ವೃತ್ತಿ ನಿರತ ಛಾಯಾಚಿತ್ರಗ್ರಾಹಕರ ಹಿತಾಸಕ್ತಿಗಾಗಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಶ್ರಮಿಸುತಿದ್ದು, ಸಂಘದೊಂದಿಗೆ ಜಿಲ್ಲೆ ಮತ್ತು ತಾಲೂಕಿನ ಸಂಘಗಳು ಸಹ ಕೈಜೋಡಿಸಿದರೆ ಮತ್ತಷ್ಟು ಕೆಲಸಗಳನ್ನು ಮಾಡಲು ಸಾಧ್ಯ ಎಂದು ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು(ಸ್ವಾಮಿ)ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಛಾಯಾಚಿತ್ರಗ್ರಾಹಕರ ಸಂಘ ತಾಲೂಕು ಘಟಕದಿಂದ ಗುರುವಾರ ಆಯೋಜಿಸಿದ್ದ ಛಾಯಾಚಿತ್ರಗ್ರಾಹಕರ ಸಂಘದ ಆಸರೆ ಯೋಜನೆಗೆ ಚಾಲನೆ ನೀಡಿ. ಮಾತನಾಡಿದರು.
ಛಾಯಾಚಿತ್ರಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರ್ಪಡೆ ಗೊಳಿಸುವಲ್ಲಿ ರಾಜ್ಯ ಸಂಘವು ಯಶಸ್ವಿಯಾಗಿದ್ದು, ಇದರಿಂದ ಛಾಯಾಚಿತ್ರಗ್ರಾಹಕರಿಗೆ ಸಾಕಷ್ಟು ಅನುಕೂಲತೆಗಳು ಲಭಿಸಲಿದೆ.
ಅಕಸ್ಮಾತ್ ಛಾಯಾಚಿತ್ರಗ್ರಾಹಕರು ಮೃತರಾದ ಸಂದರ್ಭದಲ್ಲಿ ಕುಟುಂಬದವರ ಸಹಾಯಕ್ಕಾಗಿ ಆಸರೆ ಯೋಜನೆಯನ್ನು ರೂಪಿಸಲಾಗಿದೆ. ತಾಲೂಕು ಸಂಘದಲ್ಲಿ ಸದಸ್ಯತ್ವ ಪಡೆದಿರುವ ಪ್ರತಿಯೊಬ್ಬ ಸದಸ್ಯರು ಈ ಯೋಜನೆಗೆ ಅರ್ಹರಾಗಿದ್ದು, ಇದರ ಸದೂಪಯೋಗವನ್ನು ಸಂಘದ ಎಲ್ಲ ಸದಸ್ಯರು ಪಡೆದು ಕೊಳ್ಳಬಹುದಾಗಿದೆ ಎಂದರು.
ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಕೊನೇರಿ ಸೂರಿ ಮಾತನಾಡಿ, ಸಂಘದ ರಾಜ್ಯಧ್ಯಕ್ಷ ನಾಗೇಶ್ ಅವರು ಛಾಯಾಚಿತ್ರಗ್ರಾಹಕರ ಒಳಿತಿಗಾಗಿ ಸದಾ ಕ್ರೀಯಾಶೀಲವಾಗಿ ಉತ್ತಮ ಕೆಲಸ ಕೆಲಸಗಳನ್ನು ಮಾಡುತ್ತಿರುವರು, ಮುಂದಿನ ದಿನಗಳಲ್ಲಿ ಹೆಲ್ತ್ ಕಾರ್ಡ್ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿತರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಪಿ.ಡಿ.ಚಂದ್ರಶೇಖರ್ ಮಾತನಾಡಿ, ಆಸರೆ ಯೋಜನೆಯ ಲಾಭವು ಮೃತರಾದಗ ಸಿಗುತ್ತದೆ ಎಂಬ ಭಾವನೆಯನ್ನು ಬಿಟ್ಟು, ನಾವು ಬದುಕಿದ್ದಾಗ ಇನ್ನೊಬ್ಬರಿಗೆ ಸಹಾಯ ಮಾಡಲು ಸಿಗುವ ಅವಕಾಶದ ಯೋಜನೆ ಎಂದು ಭಾವಿಸಿ. ಮುಮದಿನ ಆಗಸ್ಟ್ 19 ರೊಳಗೆ ಈ ಯೋಜನೆಗೆ ಪ್ರತಿಯೊಬ್ಬ ಸದಸ್ಯರೂ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳತಕ್ಕದ್ದು ಎಂದರು.
ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾ ಸಂ.ಕಾರ್ಯದರ್ಶಿ ನಿಲೇಶ್, ಸಹ ಕಾರ್ಯದರ್ಶಿ ಮಲ್ಲೇಶ್, ಆಸರೆ ಯೋಜನೆಯ ಉಸ್ತುವಾರಿ ಲೋಕೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಪ್ರದಾನ ಕಾರ್ಯದರ್ಶಿ ಸಂದೀಪ್, ಸಹಕಾರ್ಯದರ್ಶಿ ಅಶ್ವತ್, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ಪ್ರಭುರಾವ್, ನಿರ್ದೇಶಕ ನೀಲಕಂಠ, ಸುನೀಲ್, ರುದ್ರೇಶ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net