ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ಜಯ

ಚಿಂದೆನಹಳ್ಳಿ ಗಡಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಎಚ್.ಡಿ.ಸಿ ಸಿ.ಬ್ಯಾಂಕ್  ನಿರ್ದೇಶಕ ಹೊಸೂರು ಗಂಗಾಧರ್ ಅವರನ್ನು ಮೇಲೆತ್ತುವ ಮೂಲಕ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಚಿಂದೆನಹಳ್ಳಿ ಗಡಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಎಚ್.ಡಿ.ಸಿ ಸಿ.ಬ್ಯಾಂಕ್ ನಿರ್ದೇಶಕ ಹೊಸೂರು ಗಂಗಾಧರ್ ಅವರನ್ನು ಮೇಲೆತ್ತುವ ಮೂಲಕ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
Published on
ಗಂಡಸಿ: ತೀವ್ರ ಕುತೂಹಲ ಕೆರಳಿಸಿದ್ದ ಹೋಬಳಿಯ ಚಿಂದೆನಹಳ್ಳಿ ಗಡಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 12ಕ್ಕೆ 12 ನಿರ್ದೇಶಕ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ."

ಭಾನುವಾರ ಬೆಳಗ್ಗೆ 7 ಗಂಟೆಗೆ ಚಿಂದೆನಹಳ್ಳಿ ಗಡಿಯಲ್ಲಿರುವ ಕೆಪಿಎಸ್ ಶಾಲೆಯಲ್ಲಿ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಯಿತು. ರಾತ್ರಿ 7 ಗಂಟೆಗೆ ಮುಕ್ತಾಯವಾಗಿ ಫಲಿತಾಂಶ ಪ್ರಕಟವಾಯಿತು. ಜೆಡಿಎಸ್‌ಬೆಂಬಲಿತರಾದ ಕೆ.ಉದಯಕುಮಾರ್, ಕೆ.ಬಿ.ಉಮೇಶ್, ಮಮತಾ ಲೋಕೇಶ್, ಎಚ್.ಎಂ.ಮಹೇಂದ್ರ, ಮಾದನಾಯಕ, ವಸಂತ, ವಿಜಯಕುಮಾರ್, ಶಿವಣ್ಣ, ಎಂ.ಪಿ.ಶ್ರೀಧರ, ಶಂಭುಲಿಂಗ ಮೂರ್ತಿ, ಸುಮಿತ್ರಾ, ಪ್ರಕಾಶ್ ನಿರ್ದೇಶಕರಾಗಿ ಆಯ್ಕೆಯಾದರು. ಇನ್ನು ಕಾಂಗ್ರೆಸ್ 1 ಸ್ಥಾನ ಸಹ ಗೆಲ್ಲಲಾಗದೆ ಹೀನಾಯವಾಗಿ ಸೋಲು ಅನುಭವಿಸಿತು. ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಪುನೀತ್‌ಕುಮಾರ್ ಕಾರ್ಯನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net