ಮುಂದಿನ ಪೀಳಿಗೆಗೆ ಗಮಕ ಕಲೆ ತಲುಪಿಸುವುದು ಅವಶ್ಯ

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಬೇಲೂರಿನ ಸೌಮ್ಯಶ್ರೀ ಗಮಕ ಕಲಾ ಶಾಲೆಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನವರತ್ನ.ಎಸ್.ವಟಿ, ಗಣೇಶ್ ಉಡುಪ, ಶ್ರೀನಿವಾಸ್ ಭಟ್ಟರ್ ಇತರರು ಇದ್ದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಬೇಲೂರಿನ ಸೌಮ್ಯಶ್ರೀ ಗಮಕ ಕಲಾ ಶಾಲೆಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನವರತ್ನ.ಎಸ್.ವಟಿ, ಗಣೇಶ್ ಉಡುಪ, ಶ್ರೀನಿವಾಸ್ ಭಟ್ಟರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ಣ ಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್ ಅಭಿಪ್ರಾಯ
  • ಕುಮಾರವ್ಯಾಸ ಜಯಂತಿ
ಬೇಲೂರು: ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಜೀವಾಳವಾಗಿರುವ ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪೂರ್ಣ ಪ್ರಜ್ಞಾ ಶಾಲೆ ಪ್ರಾಂಶುಪಾಲ ಪ್ರಶಾಂತ್ ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಬೇಲೂರಿನ ಸೌಮ್ಯಶ್ರೀ ಗಮಕ ಕಲಾ ಶಾಲೆಯಿಂದ ಇತ್ತೀಚೆಗೆ ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಗಮಕ ಕಲೋತ್ಸವ ಹಾಗೂ ಕುಮಾರವ್ಯಾಸ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಮಾರ ವ್ಯಾಸರಂತಹ ಮಹಾಕವಿಗಳ ಕೃತಿಗಳು ಗಮಕ ಪರಂಪರೆಯ ಮೂಲಕ ಜನಮನಕ್ಕೆ ತಲುಪಿವೆ. ಆದರೆ ಇದನ್ನು ಶಿಲ್ಪಕಲೆಯ ತವರೂರು ಬೇಲೂರಿನಲ್ಲಿ ಗಮಕ ಕಲಾ ಶಾಲೆಯ ಮೂಲಕ ಮಕ್ಕಳಲ್ಲಿ ಸಾಹಿತ್ಯಾಸಕ್ತಿ, ಶ್ರವಣಶಕ್ತಿ ಹಾಗೂ ಭಾಷಾ ಸಂಸ್ಕಾರ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಗಮಕ ಕಲೆಯ ಮಹತ್ವ ಮತ್ತು ಅದರ ಪರಂಪರೆ, ಸಂಸ್ಕೃತಿಯ ಉಳಿವು ಬೆಳವಣಿಗೆಯಲ್ಲಿ ಗಮಕದ ಪಾತ್ರ ಮಹತ್ತರದ್ದಾಗಿದೆ. ಆದ್ದರಿಂದ ಈ ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದ್ದು, ಇಂದಿನ ಯುವ ಪೀಳಿಗೆ ಎಚ್ಚೆತ್ತು ಕೊಳ್ಳಬೇಕಿದೆ ಎಂದರು.
ಬೇಲೂರಿನ ಸೌಮ್ಯಶ್ರೀ ಗಮಕ ಕಲಾ ಶಾಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ತಾಲೂಕು ಅಧ್ಯಕ್ಷೆ ನವರತ್ನ.ಎಸ್.ವಟಿ ಮಾತನಾಡಿ, ಗಮಕ ಕಲೆ ಕೇವಲ ಕಲೆಯಷ್ಟೇ ಅಲ್ಲ, ಅದು ನಮ್ಮ ಸಂಸ್ಕೃತಿ, ಭಾಷೆ ಮತ್ತು ಬದುಕಿನ ಮೌಲ್ಯಗಳನ್ನು ರೂಪಿಸುವ ಸಾಧನವಾಗಿದೆ. ನಮ್ಮ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಗಮಕ ಕಲೆ ಅತ್ಯಂತ ಸಹಕಾರಿಯಾಗಿದೆ. ತಾಲೂಕು ಮಟ್ಟದಲ್ಲಿ ಗಮಕ ಕಲೆಯ ವಿಸ್ತರಣೆಗಾಗಿ ಇನ್ನಷ್ಟು ತರಬೇತಿ ಶಿಬಿರಗಳು ಮತ್ತು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಗಣೇಶ್ ಉಡುಪ ಮಾತನಾಡಿ, ಗಮಕ ಕಲೆ ನಮ್ಮ ನಾಡಿನ ಅಪರೂಪದ ಸಾಂಸ್ಕೃತಿಕ ಸಂಪತ್ತು. ಇಂತಹ ಕಲೆಯನ್ನು ಜೀವಂತವಾಗಿಡಲು ನಿರಂತರ ಅಭ್ಯಾಸ, ವೇದಿಕೆಗಳು, ಯುವಕರ ಭಾಗವಹಿಸುವಿಕೆ ಅಗತ್ಯ. ಸೌಮ್ಯಶ್ರೀ ಗಮಕ ಕಲಾ ಶಾಲೆಯಂತಹ ಸಂಸ್ಥೆ ಗಮಕ ಪರಂಪರೆ ಉಳಿಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟರ್ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net