ಸಕಲೇಶಪುರ -ಬಂಟ್ವಾಳ ರೈಲ್ವೆ ಮಾರ್ಗದ ಆಂತರಿಕ ಸುರಕ್ಷತಾ ಪರಿಶೀಲನೆ

ನೈರುತ್ಯರೈಲ್ವೆಯ ಮುಖ್ಯ ಕಚೇರಿ ಸುರಕ್ಷತಾ ತಂಡದ ವತಿಯಿಂದ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಂಟ್ವಾಳ ಮಾರ್ಗದ ಆಂತರಿಕ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ.ರಾಮಕೃಷ್ಣ, ಮುಖ್ಯ ಸಿಬ್ಬಂದಿ ಮತ್ತು ಸಂಚಾರ ವ್ಯವಸ್ಥಾಪಕ  ಇ.ಹರಿಕೃಷ್ಣನ್ ಸೇರಿದಂತೆ  ಮುಖ್ಯ ಕಚೇರಿಯ ಸುರಕ್ಷತಾ ಅಧಿಕಾರಿಗಳು ಭಾಗವಹಿಸಿದ್ದರು.
ನೈರುತ್ಯರೈಲ್ವೆಯ ಮುಖ್ಯ ಕಚೇರಿ ಸುರಕ್ಷತಾ ತಂಡದ ವತಿಯಿಂದ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಂಟ್ವಾಳ ಮಾರ್ಗದ ಆಂತರಿಕ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ.ರಾಮಕೃಷ್ಣ, ಮುಖ್ಯ ಸಿಬ್ಬಂದಿ ಮತ್ತು ಸಂಚಾರ ವ್ಯವಸ್ಥಾಪಕ ಇ.ಹರಿಕೃಷ್ಣನ್ ಸೇರಿದಂತೆ ಮುಖ್ಯ ಕಚೇರಿಯ ಸುರಕ್ಷತಾ ಅಧಿಕಾರಿಗಳು ಭಾಗವಹಿಸಿದ್ದರು.
Published on
ಹಾಸನ: ನೈಋತ್ಯ ರೈಲ್ವೆಯ ಮುಖ್ಯ ಕಚೇರಿ ಸುರಕ್ಷತಾ ತಂಡದ ವತಿಯಿಂದ ಮೈಸೂರು ವಿಭಾಗದ ಸಕಲೇಶಪುರ -ಬಂಟ್ವಾಳ ಮಾರ್ಗದಲ್ಲಿ ಗುರುವಾರ ಮತ್ತು ಶುಕ್ರವಾರ ಆಂತರಿಕ ಸುರಕ್ಷತಾ ಪರಿಶೀಲನೆ ನಡೆಸಲಾಯಿತು.
ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ.ರಾಮಕೃಷ್ಣ, ಮುಖ್ಯ ಸಿಬ್ಬಂದಿ ಮತ್ತು ಸಂಚಾರ ವ್ಯವಸ್ಥಾಪಕ ಇ.ಹರಿಕೃಷ್ಣನ್ ಸೇರಿದಂತೆ
ಮುಖ್ಯ ಕಚೇರಿಯ ಸುರಕ್ಷತಾ ಅಧಿಕಾರಿಗಳು ಹಾಗೂ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪರಿಶೀಲನೆಯ ವೇಳೆ ಲೆವೆಲ್ ಕ್ರಾಸಿಂಗ್ ಗೇಟ್ಗಳು, ಹಳಿ ವಕ್ರತೆಗಳು, ಸ್ವಿಚ್ ವಿಸ್ತರಣೆ ಜಾಯಿಂಟ್‌ಗಳು, ಪ್ರಮುಖ ಮತ್ತು ಸಣ್ಣ ಸೇತುವೆಗಳು, ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಪ್ರಮುಖ ಮತ್ತು ಸಣ್ಣ ನಿಲ್ದಾಣಗಳು, ಸುರಂಗ ಮಾರ್ಗಗಳು, ವೈದ್ಯಕೀಯ ಪರಿಹಾರ ವಾಹನ, ವಿದ್ಯುತ್ ಉಪಕರಣಗಳು, ಸಿಬ್ಬಂದಿ ಲಾಬಿಗಳು, ರನ್ನಿಂಗ್ ರೂಂಗಳು, ರಿಲೇ ರೂಂಗಳು ಹಾಗೂ ಟ್ರಾೃಕ್ ಯಂತ್ರ ಸಿಬ್ಬಂದಿಯ ಶಿಬಿರ ಕೋಚ್‌ಗಳು ಸೇರಿದಂತೆ ಸಕಲೇಶಪುರ -ಬಂಟ್ವಾಳ ಮಾರ್ಗಧ ವಿವಿಧ ಮಹತ್ವದ ಸ್ಥಳಗಳನ್ನು ಸೂಕ್ಷ್ಮವಾಗಿ
ಗಮನಿಸಲಾಯಿತು. ಹಳಿಗಳ ಸ್ಥಿತಿ, ಯಾರ್ಡ್ ವಿನ್ಯಾಸ, ಬ್ಯಾಟರಿ ಕೊಠಡಿಗಳು, ಸಿಗ್ನಲಿಂಗ್ ವ್ಯವಸ್ಥೆಗಳು, ನಿಲ್ದಾಣ ಪ್ಯಾನೆಲ್ಗಳು, ಟ್ರಾಕ್ಷನ್ ಉಪಕೇಂದ್ರಗಳು, ಸೆಕ್ಷನಿಂಗ್ ಮತ್ತು ಪ್ಯಾರಲೆಲಿಂಗ್ ಪೋಸ್ಟ್‌ಗಳು ಸೇರಿದಂತೆ ವಿವಿಧ ಸುರಕ್ಷತಾ ಸಂಬಂಧಿತ ವ್ಯವಸ್ಥೆಗಳು ಮತ್ತು ಸ್ಥಾಪನೆಗಳನ್ನೂ ವೀಕ್ಷಿಸಲಾಯಿತು.
ನಿಲ್ದಾಣಗಳು ಮತ್ತು ವಿಭಾಗದ ವಿವಿಧ ಸ್ಥಳಗಳಲ್ಲಿ ನಿಗದಿತ ಸುರಕ್ಷತಾ ನಿಯಮಗಳು ಹಾಗೂ ಕಾರ್ಯಾಚರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಈ ಸಂದರ್ಭ ಖಚಿತಪಡಿಸಿಕೊಳ್ಳಲಾಯಿತು. ರೈಲ್ವೆ ಕಾರ್ಯಾಚರಣೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net