‘ಡಿಜಿಟೂರ್’ನಲ್ಲಿ ಐತಿಹಾಸಿಕ ಸ್ಥಳಗಳ ಮಾಹಿತಿ

ಡಿಜಿಟೂರ್ ಆ್ಯಪ್  ಬಳಕೆಯ ವಿವಿಧ ಆಯಾಮಗಳ ಚಿತ್ರಗಳು.
ಡಿಜಿಟೂರ್ ಆ್ಯಪ್ ಬಳಕೆಯ ವಿವಿಧ ಆಯಾಮಗಳ ಚಿತ್ರಗಳು.
Published on

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ಸ್ಥಳಗಳ ಸಂಪೂರ್ಣ ವಿವರಣೆ ನೀಡಲಿರುವ ಆ್ಯಪ್
ಹಳೇಬೀಡು: ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಂಬಂಧಪಟ್ಟ ತಾಣದ ಸಮಗ್ರ ಮಾಹಿತಿ ಹಾಗೂ ಅಲ್ಲಿನ ವಾಸ್ತುಶಿಲ್ಪಗಳ ಬಗ್ಗೆ ವಿವರಣೆ ನೀಡಲು ಕೃತಕ ಬುದ್ಧಿಮತ್ತೆ ಆಧಾರಿತವಾಗಿರುವ ಡಿಜಿಟೂರ್ ಎಂಬ ಮೊಬೈಲ್ ಅಫ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಕೇಂದ್ರ ಪುರಾತತ್ವ ವಿಭಾಗದ ಪ್ರಮುಖ ಸ್ಮಾರಕಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಡಿಜಿಟೂರ್ ಆ್ಯಪ್‌ನಲ್ಲಿ ಭಾರತದ ಪ್ರಸಿದ್ಧ ಐತಿಹಾಸಿಕ ತಾಣಗಳಾದ ಅಜಂತಾ, ಸಾಂಚಿಸ್ತೂಪ, ಗುಜರಾತ್, ಖಜುರಾಹೊ, ಮಹಾಬಲಿಪುರಂ ಒಳಗೊಂಡಂತೆ ಕರ್ನಾಟಕದ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಹೊಯ್ಸಳರ ಮೂರು ಮುಖ್ಯ ದೇಗುಲಗಳಾದ ಹಳೇಬೀಡಿನ ಹೊಯ್ಸಳೇಶ್ವರ, ಬೇಲೂರಿನ ಚನ್ನಕೇಶವ ಹಾಗೂ ಸೋಮನಾಥಪುರದ ಕೇಶವ ದೇಗುಲಗಳ ಸಮಗ್ರ ವಿವರಣೆಗಳನ್ನು ಸೇರಿಸಲಾಗಿದೆ. ಪ್ರತಿ ತಾಣಗಳ ಮಾಹಿತಿ ಹಾಗೂ ಅದರ 360 ಡಿಗ್ರಿ ನೋಟದ ಧ್ವನಿ ಮತ್ತು ದೃಶ್ಯದ ಸಮ್ಮಿಲನದಿಂದ (ಐಞಞಛ್ಟಿಜಿಛಿ ಚ್ಠಜಿಟ ಜಿಠ್ಠಚ್ಝ) ಕೂಡಿದ್ದು, ಮಿಥ್ಯ ವಾಸ್ತವದ (್ಖಜ್ಟಿಠ್ಠಿಚ್ಝ ್ಟಛಿಚ್ಝಜಿಠಿ) ಮೂಲಕ ಇಡೀ ಸ್ಮಾರಕವನ್ನು ಪರಿಚಯ ಮಾಡಿಕೊಡಲಿದೆ. ಡಿಜಿಟೂರ್ ಆ್ಯಪ್ ಅನ್ನು ಮೊಬೈಲ್ಗಳಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಭಾರತೀಯ ಪುರಾತತ್ವ ವಿಭಾಗದ ಬಹಳಷ್ಟು ಸ್ಮಾರಕಗಳಲ್ಲಿ ಆ್ಯಪ್‌ನ ಕ್ಯೂ ಆರ್ ಕೋಡ್ ಮಾದರಿಯನ್ನು ಪ್ರದರ್ಶಿಸಲಾಗಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ವಿವಿಧ ಭಾಷೆಗಳಲ್ಲಿ ಆ್ಯಪ್ ಸೆಟ್ಟಿಂಗ್ಸ್‌ಗಳು ಲಭ್ಯವಾಗುವಂತೆ ಮಾಡಲಾಗಿದೆ. ಪ್ರಸ್ತುತ ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಎಐ ಆಧಾರಿತ ಧ್ವನಿ ಹಾಗೂ ದೃಶ್ಯದ ಮೂಲಕ ದೇಗುಲಗಳ ಮಾಹಿತಿಯೂ ದೊರಕುತ್ತಿದೆ. ವಿವರಣೆಯನ್ನು ಮಾರ್ಗದರ್ಶಿತ ಹಾಗೂ ಮಿಥ್ಯಾವಾಸ್ತವ ಟೂರ್ ಎಂದು ವಿಭಾಗಿಸಲಾಗಿದ್ದು, ಎರಡೂ ಮಾದರಿಯಲ್ಲಿ ಪ್ರವಾಸಿಗರಿಗೆ ಉತ್ತಮ ಅನುಭವ ದೊರಕುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕರ್ನಾಟಕದ ವಿವಿಧ ಸ್ಮಾರಕಗಳ ಬಗ್ಗೆ ಅವುಗಳನ್ನು ನೋಡುತ್ತಲೇ ವಿವರಣೆ (ಎ್ಠಜಿಛಿ ಠಿಟ್ಠ್ಟ) ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಕುಳಿತಲ್ಲಿಯೇ ವರ್ಚುಯಲ್ ಟೂರ್ ಮೂಲಕವೂ ಇಡೀ ತಾಣವನ್ನು ಸಂದರ್ಶಿಸಬಹುದು.
ಪ್ರವಾಸಿ ಮಾರ್ಗದರ್ಶಿಗಳ ಅಲಭ್ಯತೆಯ ಸಂದರ್ಭದಲ್ಲಿ ಡಿಜಿಟೂರ್ ಆ್ಯಪ್ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸುತ್ತಿದ್ದು, ಪ್ರಸ್ತುತ ಇದನ್ನು ಅಳವಡಿಸಿಕೊಳ್ಳಲು ಮತ್ತು ಬಳಸಲು ಯಾವುದೇ ಶುಲ್ಕ ತೆರಬೇಕಾಗಿಲ್ಲ. ಭವಿಷ್ಯದಲ್ಲಿ ಚಂದಾದಾರಿಕೆ ಪಡೆದುಕೊಳ್ಳುವ ಯೋಜನೆಯನ್ನು ಆರಂಭಿಸುವ ಬಗ್ಗೆ ಅಫ್ಲಿಕೇಷನ್‌ನಲ್ಲಿ ಮಾಹಿತಿ ನೀಡಲಾಗಿದ್ದು, ಕನಿಷ್ಠ 10 ರಿಂದ ಗರಿಷ್ಠ 80 ರೂ. ದರವನ್ನು ನಿಗದಿಪಡಿಸುವ ಉದ್ದೇಶವನ್ನು ಆ್ಯಪ್ ಅಭಿವೃದ್ಧಿ ಪಡಿಸಿರುವ ಡಿಜಿಟೂರ್ ಟೆಕ್ನಾಲಜೀಸ್ ಸಂಸ್ಥೆ ವ್ಯಕ್ತಪಡಿಸಿದೆ. ಪ್ರಸ್ತುತ ಭಾರತೀಯ ಪುರಾತತ್ವ ವಿಭಾಗದ ಸಹಯೋಗದೊಂದಿಗೆ ವಿಶ್ವಪರಂಪರೆ ಸ್ವಾರಕಗಳಲ್ಲಿ ಆ್ಯಪ್ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಪ್ರವಾಸಿ ಮಾರ್ಗದರ್ಶಿಗಳ ವಿವರಣೆಯು ಆಪ್ತ ಸಮಾಲೋಚನೆ ಹಾಗೂ ಪ್ರಶ್ನೋತ್ತರಗಳ ಮೂಲಕ ಸಂಶಯಗಳ ನಿವಾರಣೆಗೆ ಸಹಾಯಕವಾದರೆ, ಡಿಜಿಟಲ್ ಮಾದರಿಯು ಏಕಮುಖ ಸಂಚಾರದ ರೀತಿ ಕಾರ್ಯನಿರ್ವಹಿಸುತ್ತದೆ ಎಂಬ ಅಭಿಪ್ರಾಯ ಪ್ರವಾಸಿಗರಿಂದ ವ್ಯಕ್ತವಾಗಿದೆ.
ಅತ್ಯುತ್ತಮ ಕ್ಯಾಮರಾಗಳನ್ನು ಬಳಸಿ 360 ಡಿಗ್ರಿ ಕೋನದಲ್ಲಿ ದೇಗುಲಗಳನ್ನು ವೀಕ್ಷಿಸುತ್ತ ಆಯ್ದ ಭಾಷೆಯಲ್ಲಿ ವಿವರಣೆಯನ್ನು ಪಡೆಯುವಂತೆ ಯಪ್ ಅಭಿವೃದ್ಧಿಪಡಿಲಾಗಿದೆ. ಇದಕ್ಕೆ ಪ್ರಶಾಂತ್ ಪ್ರಕಾಶ್ ಕುಟುಂಬ ಮತ್ತು ಸಂಸ್ಥೆಯವರು ಸಹಕಾರ ನೀಡಿದ್ದು, ಭಾರತೀಯ ಪುರಾತತ್ವ ವಿಭಾಗವು ಸ್ಮಾರಕಗಳನ್ನು ಪರಿಚಯಿಸಲು ಅನುಮತಿ ನೀಡಿ ಸಹಕರಿಸಿದೆ. ಅಫ್ಲಿಕೇಷನ್ ಅನ್ನು ದೇಶದ ಎಲ್ಲ ಭಾಷೆಗ ಳಲ್ಲಿ ಲಭ್ಯವಾಗುವಂತೆ ಮಾಡಿ ಇನ್ನಷ್ಟು ಐತಿಹಾಸಿಕ ತಾಣಗಳನ್ನು ಇದರಡಿಯಲ್ಲಿ ತರುವುದು ಭವಿಷ್ಯದ ಯೋಜನೆಯಾಗಿದೆ.
ಆನಂದ್ ಬಾಬು ಡೆವಲೆಪರ್ ಹಾಗೂ ತಂತ್ರಜ್ಞ, ಡಿಜಿಟೂರ್ ಟೆಕ್ನಾಲಜೀಸ್
ಪ್ರವಾಸಿ ಸ್ಥಳಗಳ ಮಾಹಿತಿಗಾಗಿ ಅಭಿವೃದ್ಧಿ ಪಡಿಸಿರುವ ಡಿಜಿಟೂರ್ ಆ್ಯಪ್ ಉತ್ತಮ ತಂತ್ರಜ್ಞಾನ ಬಳಕೆಯಿಂದ ಕೂಡಿದ್ದು ಆಧುನಿಕ ಮಾದರಿಯಲ್ಲಿದೆ. ಬಹಳಷ್ಟು ಜನರು ಐತಿಹಾಸಿಕ ತಾಣಗಳ ಬಗ್ಗೆ ಮಾಹಿತಿ ಪಡೆಯದೆ ಕೇವಲ ಮನೋರಂಜನಾ ಪ್ರವಾಸ ಮಾಡುತ್ತಾರೆ. ಅವರನ್ನು ತಂತ್ರಜ್ಞಾನದ ಮೂಲಕ ತಲುಪಲು ಈ ಆ್ಯಪ್ ಸಹಕಾರಿಯಾಗಿದೆ. ಇದನ್ನು ನೋಡಿದ ಬಳಿಕ ಪ್ರತಿಯೊಂದು ಐತಿಹಾಸಿಕ ಸ್ಮಾರಕದಲ್ಲೂ ಪ್ರವಾಸಿ ಮಾರ್ಗದರ್ಶಿಗಳ ಸೇವೆ ಪಡೆಯಬೇಕು ಎಂಬ ಅಂಶವೂ ಮನದಟ್ಟಾಗುತ್ತದೆ. ಏಕೆಂದರೆ, ಅಲ್ಲಿ ನಾವು ಸಂವಹನದ ಮೂಲಕ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ, ಡಿಜಿಟೂರ್ ಮಾದರಿಯಲ್ಲಿ ಅಲ್ಲಿ ಹೇಳುವುದನ್ನಷ್ಟೆ ಕೇಳಬೇಕಾಗುತ್ತದೆ.
ವಿಕಾಸ್ ಹೆಗಡೆ ಪ್ರವಾಸಿಗ, ಬೆಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net