ಹಾಸನ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಎಚ್‌ಕೆಎಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೈಗೊಂಡ ಕೈಗಾರಿಕಾ ಅಧ್ಯಯನ ಭೇಟಿಯ ವರದಿ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ ಹಾಗೂ ಜ್ಞಾನದಿಂದ ವಿಭಿನ್ನವಾಗಿ ವಿನ್ಯಾಸಗೊಳಿಸಿದ ವರದಿಗಳನ್ನು ಪ್ರಸ್ತುತಪಡಿಸಿದರು. ಹಾಸನದ ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕೈಗಾರಿಕ ಅಧ್ಯಯನ ಭೇಟಿಯ ವರದಿಯನ್ನು ಸ್ವೀಕರಿಸಿದ ಪ್ರಾಂಶುಪಾಲರು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹಾಗೂ ವಾಣಿಜ್ಯಶಾಸ ವಿಭಾಗವು ಹಮ್ಮಿಕೊಳ್ಳುವ ಮಹತ್ವಪೂರ್ಣ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ ಪ್ರಾಂಶುಪಾಲ ಲೋಕೇಶ್ ಪೂಜಾರಿ ಮಾತನಾಡಿದರು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿಮಲ್ ರಾಜ್ ಜಿ ಅವರು ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗಳನ್ನು ಭೇಟಿ ಮಾಡುವುದರಿಂದ ಹಲವಾರು ಮಾಹಿತಿ ತಿಳಿಯಬಹುದು. ಮನವರಿಕೆಯಾದ ವಿಷಯಗಳ ವರದಿಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕುರಿತು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪ್ರಾಂಶುಪಾಲ ಎ. ಪ್ರವೀಣ್, ಉಪ ಪ್ರಾಂಶುಪಾಲ ಲೋಕೇಶ್ ಪೂಜಾರಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಿ.ಎಲ್.ಅಶ್ವಿನಿ, ಅರ್ಥಶಾಸ ಉಪನ್ಯಾಸಕರಾದ ಸುಧಾಮ ಉಡುಪ ಉಪಸ್ಥಿತರಿದ್ದರು.