ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಬೇಡಿ

  ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಮಾದರಿ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಹಾಗೂ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಎಚ್.ಕೆ. ಅಶೋಕ್, ಪ್ರಾಂಶುಪಾಲ ಜಿ. ಮಂಜುನಾಥ, ನಿಲಯ ಪಾಲಕಿ ಜ್ಞಾನೇಶ್ವರಿ ಇತರರು ಇದ್ದರು.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಮಾದರಿ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಹಾಗೂ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಎಚ್.ಕೆ. ಅಶೋಕ್, ಪ್ರಾಂಶುಪಾಲ ಜಿ. ಮಂಜುನಾಥ, ನಿಲಯ ಪಾಲಕಿ ಜ್ಞಾನೇಶ್ವರಿ ಇತರರು ಇದ್ದರು.
Published on
ಹೊಳೆನರಸೀಪುರ : ಜಗತ್ತಿನಲ್ಲಿ ಆಧುನಿಕತೆ ಬೆಳೆದಂತೆ ಯುವಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಕನ್ನಡ ಉಪನ್ಯಾಸಕ ಎಚ್.ಕೆ. ಅಶೋಕ್ ಹೇಳಿದರು. ತಾಲೂಕಿನ ಹರದನಹಳ್ಳಿ ಮಾದರಿ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಜಾನಪದ ಉತ್ಸವ ಹಾಗೂ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವುದು ಉತ್ತಮ ಬೆಳವಣಿಗೆ ಅಲ್ಲ. ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಮಾತ್ರ ಪ್ರತಿನಿಧಿಸಬೇಕು ಎಂದರು. ನಮ್ಮ ಪೂರ್ವಜರು ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನೇ ಸೇವಿಸಿ ದೀರ್ಘಾಯುಷಿಗಳಾಗಿ ಬದುಕು ನಡೆಸಿದರು. ಆದರೆ ಇಂದಿನ ಪೀಳಿಗೆ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ತ್ಯಜಿಸಿ ವಿದೇಶೀ ಆಹಾರ ಪದಾರ್ಥ ಸೇವನೆಯಿಂದ ಆಯುಷ್ಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಸಾಂಪ್ರದಾಯಿಕ ಜಾನಪದ ಸಂಸ್ಕೃತಿಯನ್ನು ಅನುಸರಿಸಬೇಕು. ನಮ್ಮ ಆರೋಗ್ಯ ಪಾಲನೆಗೆ ನಮ್ಮದೇ ಆದ ಆಹಾರ, ವಿಹಾರ ಪದ್ಧತಿ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ನಮ್ಮ ಹಿರಿಯರು ಪಂಚಭೂತಗಳಲ್ಲಿ ದೇವರನ್ನು ಕಂಡಿದ್ದಾರೆ. ಬದುಕಿಗೆ ಅವಶ್ಯಕವಾಗಿ ಬೇಕಾಗಿರುವ ನೆಲ, ಜಲದಲ್ಲಿ ಭಗವಂತನನ್ನು ದರ್ಶನ ಮಾಡಿದ್ದಾರೆ. ನಮ್ಮ ನಾಡಿನ ಜಾನಪದ ಸಂಸ್ಕೃತಿಯಲ್ಲಿ ಅಧ್ಯಾತ್ಮದ ಸೆಲೆಗಳನ್ನು ಕಂಡುಕೊಳ್ಳುವುದು ಎಂದರೆ ಇದು ಜಗತ್ತಿಗೆ ಭಾರತ ಸಾರಿದ ವಿಶೇಷ ಅನುಭೂತಿ ಎಂದರು. ಈ ಕಾರಣಕ್ಕಾಗಿಯೇ ನಾವು, ನಮ್ಮ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ನುಡಿದರು.
ಪ್ರಾಂಶುಪಾಲ ಜಿ. ಮಂಜುನಾಥ, ನಿಲಯ ಪಾಲಕಿ ಜ್ಞಾನೇಶ್ವರಿ ಮಾತನಾಡಿದರು. ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್, ಆನಂದ್, ಮಹೇಶ, ಉಮೇಶ, ಸುರೇಶಕುಮಾರ,
ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net