ಅರಕಲಗೂಡು: ತಾಲೂಕಿನ ಕೊಣನೂರಿನ ಉಳ್ಳೇನಹಳ್ಳಿ ನಳಂದ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಯೋಗ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಸಕೀನಾ ಮಾತನಾಡಿ, ಯೋಗವು ವಯೋ ಸಹಜ ಸ್ನಾಯು ಕ್ಷಯವನ್ನು ತಡೆಯಲು ಸಹಾಯ ಮಾಡುತ್ತದೆ. ದೀರ್ಘವಾದ ಉಸಿರಾಟದ ಪ್ರಕ್ರಿಯೆ ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆ ಆಗುವಂತೆ ಮಾಡುತ್ತದೆ. ಪ್ರಾಣಯಾಮದ ಅಭ್ಯಾಸ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಆಸನಗಳು ದೇಹವನ್ನು ಬಲಪಡಿಸಿದರೆ ಪ್ರಾಣಾಯಾಮವು ಜೀವಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.
ಸಹ ಶಿಕ್ಷಕರಾದ ದಿವ್ಯಾ, ಮಿಸ್ರಿಯ, ಜಗದೀಶ್, ಅರ್ಪಿತಾ, ನಿಖತ್, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.