ಸನಾತನ ಹಿಂದೂ ದರ್ಮದ ಪದ್ದತಿ ಅನುಸರಿಸದಿದ್ದರೆ ಅಪತ್ತು ಕಾದಿದೆ

  ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ ನಡೆದ ಹಿಂದೂ ಸಮಾಜೋತ್ಸವದಲ್ಲಿ ಹೊ, ಸು, ರಮೇಶ್ ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ಶಶಿಶೇಖರ ಸಿದ್ದ ಬಸವ ಸ್ವಾಮೀಜಿ, ನಿವೃತ್ತ ದೈಹಿಕ  ಶಿಕ್ಷಕ ಸ್ವಾಮಿ ಉಪಸ್ಥಿತರಿದ್ದರು
ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ ನಡೆದ ಹಿಂದೂ ಸಮಾಜೋತ್ಸವದಲ್ಲಿ ಹೊ, ಸು, ರಮೇಶ್ ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ಶಶಿಶೇಖರ ಸಿದ್ದ ಬಸವ ಸ್ವಾಮೀಜಿ, ನಿವೃತ್ತ ದೈಹಿಕ ಶಿಕ್ಷಕ ಸ್ವಾಮಿ ಉಪಸ್ಥಿತರಿದ್ದರು
Published on
ಅರಸಿಕೆರೆ ಗ್ರಾಮಾಂತರ :_ ಹಿಂದುಸ್ತಾನದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಹಿಂದುವಾಗಿಯೇ ಇರಬೇಕು ಮತ್ತು ಈ ದೇಶದ ಪರಿಕಲ್ಪನೆ ಮತ್ತು ತ್ಯಾಗ ಬಲಿದಾನ ಸಂಸ್ಕೃತಿ ಯೋಗ ಹಾಗು ಸಂಪತ್ತು ಇವುಗಳ ತಳಹದಿಯಲ್ಲಿ ಇದ್ದು ಇಂದು ಭಾರತ ಪ್ರಪಂಚದಲ್ಲಿ ಅಗ್ರಮಾನ್ಯವಾಗಿದೆ ಎಂದು ವಿದ್ಯಾಭಾರತಿ ಹಾಸನ ಜಿಲ್ಲಾ ಸಂಚಾರಕ ಹೊ,ಸು, ರಮೇಶ್ ಅಭಿಪ್ರಾಯ ಪಟ್ಟರು
ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೆಟ್ಟಿ ಕುರ್ಕೆ ಗ್ರಾಮದಲ್ಲಿ ಸಮಾಜದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸನಾತನ ಹಿಂದೂ ಧರ್ಮದ ಪದ್ಧತಿಯನ್ನು ಅನುಸರಿಸದೇ ನಮ್ಮಲ್ಲಿ ವಳ ಜಗಳ ಮಾಡಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು ಸಮಾಜದಲ್ಲಿ ಮೇಲು ಕೀಳು ಎನ್ನದೆ ಸ್ಪೃಶ, ಅಸ್ಪೃಶ್ಯ ಎನ್ನದೆ ಎಲ್ಲರನ್ನು ಸಮಾನರಾಗಿ ಕಾಣಬೇಕು ಎಂದು ಹೇಳಿದರು ಸಮಾರಂಭದ ಮುಖ್ಯ ಸಾನಿಧ್ಯ ವಹಿಸಿದ ಬೂದಿಹಾಳ ವಿರುಕ್ತಮಠದ ಶ್ರೀ ಶಶಿ ಶೇಖರ ಸಿದ್ದ ಬಸವ ಸ್ವಾಮೀಜಿ ಮಾತನಾಡಿ ಇಂದು ನಾವು ಯಾವುದೇ ಭಯವಿಲ್ಲದೆ ಬದುಕು ಸಾಗುತ್ತಿದ್ದರೆ ಅದು ಈ ದೇಶವನ್ನು ಕಾಯುವ ಸೈನಿಕರಿಂದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಾತ್ರ ಸಾಧ್ಯ ಹಾಗಾಗಿ ನಾವು ರಾಷ್ಟ್ರೀಯ ಸ್ವಯಂ ಸಂಘವನ್ನು ಗೌರವ ನಡೆಸಿಕೊಂಡು ನಮ್ಮ ಯುವ ಪೀಳಿಗೆಯನ್ನು ಅದರೊಟ್ಟಿಗೆ ಬೆಸೆದಾಗ ಮಾತ್ರ ಈ ದೇಶ ಗಟ್ಟಿ ಆಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಸುವುದರ ಮೂಲಕ ಡೊಳ್ಳು ವಾದ್ಯ ಡ್ರಮ್ ಸೆಟ್ ಜೊತೆಗೆ ಹಿಂದೂ ಧರ್ಮಕ್ಕೆ ಜಯಕಾರ ಹಾಕುವ ಅದರ ಮೂಲಕ ಮೆರವಣಿಗೆಯಲ್ಲಿ ಮೆರೆದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ದೈಹಿಕ ಶಿಕ್ಷಕ ಕಲ್ಲುಸಾದರಹಳ್ಳಿ ಸ್ವಾಮಿ ವಹಿಸಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net