ಹಳೆಕೋಟೆ ಹೋಬಳಿಯ ಕಾಮಸಮುದ್ರ ಗ್ರಾಮದ ರಮೇಶ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳವು ನಡೆದಿದೆ. ಜು.18ರಂದು ಹಾಸನದ ಮಗಳ ಮನೆಗೆ ಮನೆಯವರು ತೆರಳಿದ್ದರು. ಭಾನುವಾರ ಹಿಂದಿರುಗಿದ ವೇಳೆ ಮನೆಯ ಬೀಗ ಮುರಿದು ಬಾಗಿಲು ತೆರೆದಿತ್ತು. ಇದರಿಂದ ಕಳವು ನಡೆದಿದೆ ಎಂದು ಖಾತ್ರಿಯಾದ ಹಿನ್ನ್ನೆಲೆಯಲ್ಲಿ ರಮೇಶ್ ಪತ್ನಿ ಪ್ರೇಮ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳ ಮಹಜರ್ ನಡೆಸಿದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.