ಸಂಸ್ಕೃತಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ

  ಬಾಣಾವರ ಪಟ್ಟಢದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಉಧ್ಘಾಟಿದ ಶ್ರೀ ಅಬಿನವ ಬಸವಲಿಂಗ ಸ್ವಾಮಿಜೀ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮಿಜೀ,, ಶ್ರೀ ಸರ್ದಾರ್ ಸೇವಲಾಲ್ ಸ್ವಾಮಿಜೀ, ಗೋವೀಂದಜೀ, ಭೋಜನಾಯ್ಕ್, ಇತರರು ಹಾಜರಿದ್ದರು
ಬಾಣಾವರ ಪಟ್ಟಢದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಉಧ್ಘಾಟಿದ ಶ್ರೀ ಅಬಿನವ ಬಸವಲಿಂಗ ಸ್ವಾಮಿಜೀ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮಿಜೀ,, ಶ್ರೀ ಸರ್ದಾರ್ ಸೇವಲಾಲ್ ಸ್ವಾಮಿಜೀ, ಗೋವೀಂದಜೀ, ಭೋಜನಾಯ್ಕ್, ಇತರರು ಹಾಜರಿದ್ದರು
Published on
ಅರಸೀಕೆರೆ ಗ್ರಾಮಾಂತರ : ಸನಾತನ ಸಂಸ್ಕೃತಿ, ಸಂಪ್ರದಾಯಗಳ ಆಚರಣೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಬೌದ್ಧಿಕ್ ಪ್ರಮುಖ ಗೋವಿಂದ ಹೇಳಿದರು. ತಾಲೂಕಿನ ಬಾಣಾವರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ನೇ ವರ್ಷದ ನೆನಪಿಗೆ ಶನಿವಾರ ಅಯೋಜಿಸಿದ್ದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಪ್ರಪಂಚದಲ್ಲಿ ಯಾವ ರಾಷ್ಟ್ರವೇ ಪರಸ್ಪರ ಕಿತ್ತಾಡಿಕೊಂಡರೆ ಅದನ್ನು ಸಮನ್ವಯ ಮಾಡುವಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತವೇ ಬೇಕು. ವಿಶ್ವದಲ್ಲಿ ಇರುವ ಎಲ್ಲರೂ ವಸುದೇವ ಕುಟುಂಬದವರು ಎಂದು ನಂಬಿದವರು ನಾವು. ಹಾಗಾಗಿ ವೈಶ್ವ ಮೈತ್ರಿ ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಬೇರೂರಿದೆ. ಹಾಗಿರುವಾಗ ನಮ್ಮ ನಮ್ಮಲ್ಲಿ ಜಾತಿ, ಮತ, ಪಂಥಗಳ ಒಳ ಜಗಳ ಬಿಟ್ಟು ಎಲ್ಲರೂ ಒಂದು ಎಂಬ ಭಾವದಿಂದ ಬದುಕಬೇಕು ಎಂದರು. ನಮ್ಮ ಮನೆಯ ಆಚಾರ, ವಿಚಾರಗಳ ಪ್ರಮುಖ ಶಕ್ತಿ ಕೇಂದ್ರವೇ ಗೃಹಿಣಿ. ಆಕೆಯಿಂದ ಮಾತ್ರ
ಇಡೀ ಕುಟುಂಬ ಸಂಸ್ಕಾರ ಕಲಿಯಲು ಸಾಧ್ಯ ಎಂದು ಗೋವಿಂದ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಬೆಲಗೂರು ಮಾರುತಿ ಪೀಠದ ಶ್ರೀ ವಿಜಯ ಮಾರುತಿ ಶರ್ಮಾ ಮಾತನಾಡಿ, ಮುಂದೆ ಗುರಿ ಇರಬೇಕು. ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು. ಹಾಗಿದ್ದರೆ ಮಾತ್ರ ನಾವು ನಿಗದಿತ ಗುರಿ ತಲುಪಲು ಸಾಧ್ಯ ಎಂದರು.
ಮನದಿಂದ ಕೆಟ್ಟ ಭಾವನೆ ತೊಲಗಬೇಕು. ದ್ವಂದ್ವ ನೀತಿಯಿಂದ ಎಲ್ಲರೂ ಹೊರ ಬರಬೇಕು. ಆಗ ನಾವು ಸುಖ ಜೀವನ ನಡೆಸಲು ಸಾಧ್ಯ ಎಂದರು.
ಮಾರಗೊಂಡನಹಳ್ಳಿ ವಿರಕ್ತ ಮಠದ ಶ್ರೀ ಅಭಿನವ ಬಸಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಭವ್ಯ ಪರಂಪರೆಯಿಂದಲೇ ಇಂದು ವಿಶ್ವ ಗುರುವಾಗಿದೆ ಎಂದರು. ನಮ್ಮ ದೇಶದ ಧರ್ಮ ನಮಗೆ ಶ್ರೇಷ್ಠ. ಪಾಶ್ಚಿಮಾತ್ಯ ದೇಶದ ಸಂಸ್ಕೃತಿ ನಮಗೆ ಬೇಡ ಎಂದು ಹೇಳಿದರು.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿದರು. ಬೋಜನಾಯ್ಕ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯ ಗಾಯತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ಶ್ರೀ ಲಕ್ಷ್ಮೀ ಚನ್ನಕೇಶವ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸಂದರ್ಭ ವೀರಭದ್ರ ಕುಣಿತ, ಕೋಲಾಟ, ಡೊಳ್ಳು ಕುಣಿತ ಗಮನಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net