ಎಚ್.ಕೆ.ಯೋಗೇಶ್ ಅವಿರೋಧ ಆಯ್ಕೆ

ದಿಡಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉಳ್ಳಾವಳ್ಳಿ ಗ್ರಾಮದ ಎಚ್.ಕೆ.ಯೋಗೇಶ್ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಪುಟ್ಟರಾಜು, ಎಂ.ಆರ್.ವಾಸು, ಉಗೇನಹಳ್ಳಿ ರಘುರಾಂ, ತಾತೇಗೌಡ, ಕುಮಾರ್ ಇದ್ದರು.
ದಿಡಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉಳ್ಳಾವಳ್ಳಿ ಗ್ರಾಮದ ಎಚ್.ಕೆ.ಯೋಗೇಶ್ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಪುಟ್ಟರಾಜು, ಎಂ.ಆರ್.ವಾಸು, ಉಗೇನಹಳ್ಳಿ ರಘುರಾಂ, ತಾತೇಗೌಡ, ಕುಮಾರ್ ಇದ್ದರು.
Published on
ಹಿರೀಸಾವೆ: ಹೋಬಳಿಯ ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಉಳ್ಳಾವಳ್ಳಿ ಗ್ರಾಮದ ಎಚ್.ಕೆ.ಯೋಗೇಶ್ 3ನೇ ಬಾರಿಗೆ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅದರಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಯೋಗೇಶ್ ಹೊರತುಪಡಿಸಿ ಮತ್ತಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಚ್.ಕೆ.ಯೋಗೇಶ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಮಾರ್ಗದರ್ಶನ ಹಾಗೂ ಸಂಘದ ನಿರ್ದೇಶಕರ ಸಹಕಾರದೊಂದಿಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಥಮ ಬಾರಿಗೆ ಸಂಘದ ಅಧ್ಯಕ್ಷನಾಗಿದ್ದ ವೇಳೆ ಹಳೇ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಎಚ್.ಕೆ.ಯೋಗೇಶ್ ಅವರನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ಎಪಿಎಂಸಿ ಮಾಜಿ ಅಧ್ಯಕ್ಷ ಉಗೇನಹಳ್ಳಿ ರಘುರಾಂ, ಸಂಘದ ಮಾಜಿ ಅಧ್ಯಕ್ಷ ತಾತೇಗೌಡ, ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ಟಿ.ಎಸ್.ಮಧು, ಬಾಲು, ಎಚ್.ಎಸ್.ಮಹೇಶ್, ಲೋಕೇಶ್, ವೆಂಕಟೇಶ್, ಜಯಮ್ಮ, ಸುಮಿತ್ರಾ, ತುಳಸಿ, ಕಾರ್ಯನಿರ್ವಹಣಾಧಿಕಾರಿ ನಿಂಗಮ್ಮ, ಸಿಬ್ಬಂದಿ ವರ್ಗ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net