ಇತಿಹಾಸ ಪ್ರಸಿದ್ಧ ಬಸವಣ್ಣ ದೇವಾಲಯ ಜೀರ್ಣೋದ್ಧಾರ

ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಅರಕೆರೆಯಲ್ಲಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವಾಗಿದ್ದು, ಏ.20ರಂದು ಲೋಕಾರ್ಪಣೆಗೊಳ್ಳಲಿದೆ.
ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಅರಕೆರೆಯಲ್ಲಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವಾಗಿದ್ದು, ಏ.20ರಂದು ಲೋಕಾರ್ಪಣೆಗೊಳ್ಳಲಿದೆ.
Published on

ಪ್ರಮುಖ ಮುಖ್ಯಾಂಶಗಳು

  • Basavanna Temple
ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಅರಕೆರೆಯಲ್ಲಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವಾಗಿದ್ದು, ಏ.20ರಂದು ಲೋಕಾರ್ಪಣೆಗೊಳ್ಳಲಿದೆ.
ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಏ.19ರಂದು ಧರ್ಮ ಧ್ವಜಾರೋಹಣ, ಗಣಪತಿ ಪೂಜೆ, ಆವರಣ ಪೂಜೆ, ವಾಸ್ತು ಪೂಜೆಯೊಂದಿಗೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಿವೆ.
ಏ.20ರ ಸೋಮವಾರ ಬೆಳಗ್ಗೆ 4.30ರಿಂದ 5.30ಕ್ಕೆ ಸಲ್ಲುವ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ದೀಪಾರಾಧನೆ, ಘಂಟಾನಾದ, ಮಂತ್ರ ಪರಣದೊಂದಿಗೆ ಮಹಾಗಣಪತಿ, ಬಸವೇಶ್ವರ ಸ್ವಾಮಿ, ಗೌರಿ ಅಮ್ಮನವರ ಅಷ್ಟಬಂಧನ ನಂತರ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಬೆಳಿಗ್ಗೆ 9.15 ರಿಂದ 9.40ರ ಶುಭ ವೃಷಭ ಲಗ್ನದಲ್ಲಿ ದೃಷ್ಟಿಪೂಜೆ, ನವಗ್ರಹ, ಅಷ್ಟದಿಕ್ಪಾಲಕ, ಮಹಾಮೃತ್ಯುಂಜಯ ರುದ್ರಹೋಮ, ಅಷ್ಟ ಲಕ್ಷ್ಮೀಹೋಮ, ಕಾಂತಿ ಹೋಮ, ಗ್ರಾಮ ದೇವರ ಹೋಮ ಸೇರಿ ಹಲವು ಆಚರಣೆಗಳು ಜರುಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಸ್ಥಾನಕ್ಕಿದೆ 800 ವರ್ಷಗಳ ಇತಿಹಾಸ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಅರಕೆರೆ ಗ್ರಾಮದ ಶ್ರೀಬಸವೇಶ್ವರ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಇದು ಹೊಯ್ಸಳರ ರಾಜ ಎರಡನೇ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಕ್ರಿ.ಶ. ಸುಮಾರು 1220 ನಿರ್ಮಿತವಾಗಿದೆ. ಇದರ ವಾಸ್ತು ಶಿಲ್ಪವು ವಿಶೇಷವಾಗಿದ್ದು, ನಕ್ಷತ್ರಾಕಾರದ ವಿನ್ಯಾಸ, ಕಲಾತ್ಮಕ ಕೆತ್ತನೆಗಳಿವೆ. ಈ ಪ್ರಾಂತವನ್ನು ಹೊಯ್ಸಳರು ನಂತರ ವಿಜಯ ನಗರದ ಅರಸರು, ತರೀಕೆರೆ ತಿಮ್ಮಪ್ಪ ನಾಯಕರು, 1690ರಲ್ಲಿ ಮೈಸೂರು ಒಡೆಯರ ಆಳಿದ್ದರು. ಶಿಥಿಲಗೊಂಡಿದ್ದ ದೇವಸ್ಥಾನವನ್ನು ಗ್ರಾಮಸ್ಥರೇ ಜೀರ್ಣೋದ್ಧಾರಗೊಳಿಸಿದ್ದು, ಇದೀಗ ಲೋಕಾರ್ಪಣೆಗೊಳ್ಳುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net