ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ

ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಸೋಮವಾರ ಆಯೋಜಿಸಿದ್ದ ಅಂಚೆಚೀಟಿಗಳು ಮತ್ತು ನಾಣ್ಯಗಳ 150ನೇ ಪ್ರದರ್ಶನದಲ್ಲಿ ಸಂಗ್ರಹಕಾರ ಎಚ್. ಕೆ. ಸತೀಶ್ ರವರನ್ನು ಸನ್ಮಾನಿಸಲಾಯಿತು. ಪ್ರಮೋದ್, ಗೋವಿಂದರಾಜು, ತೋಟಿ ಮಂಜು, ಮಂಜುನಾಥ್, ಆಶಾ ಮಹೇಶ್ ಇತರರು ಇದ್ದರು.
ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಸೋಮವಾರ ಆಯೋಜಿಸಿದ್ದ ಅಂಚೆಚೀಟಿಗಳು ಮತ್ತು ನಾಣ್ಯಗಳ 150ನೇ ಪ್ರದರ್ಶನದಲ್ಲಿ ಸಂಗ್ರಹಕಾರ ಎಚ್. ಕೆ. ಸತೀಶ್ ರವರನ್ನು ಸನ್ಮಾನಿಸಲಾಯಿತು. ಪ್ರಮೋದ್, ಗೋವಿಂದರಾಜು, ತೋಟಿ ಮಂಜು, ಮಂಜುನಾಥ್, ಆಶಾ ಮಹೇಶ್ ಇತರರು ಇದ್ದರು.
Published on
ಹಿರೀಸಾವೆ: ಹಲವು ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಸಂಪಾದಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಎಂದು ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರ ಎಚ್.ಕೆ. ಸತೀಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಏರ್ಪಡಿಸಿದ್ದ ಅಂಚೆ ಚೀಟಿಗಳು ಮತ್ತು ನಾಣ್ಯಗಳ 150 ನೇ ಪ್ರದರ್ಶನದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅತಿ ಹೆಚ್ಚಿನ ಬೆಲೆಯ ಬಟ್ಟೆಗಳನ್ನೇ ಧರಿಸಬೇಕು, ಐಷಾರಾಮಿಯಾಗಿ ಬದುಕಬೇಕು ಎನ್ನುವುದು ಮುಖ್ಯವಲ್ಲ. ಜೀವನದ ಯಶಸ್ಸಿಗೆ ಉತ್ತಮ ಪುಸ್ತಕಗಳನ್ನು
ಓದಬೇಕು. ಅಧ್ಯಯನವನ್ನು ಇಷ್ಟ ಪಡಬೇಕು. ಈ ಮೂಲಕ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಬೇಕು ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಚ್.ಎ. ಪ್ರಮೋದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪದವಿ ಹಂತದಲ್ಲಿ ಸಮಯ ಎನ್ನುವುದು ಬಹಳ ಮುಖ್ಯ. ಈ ಹಂತದಲ್ಲಿ ಯುವಜನರು ಮುಂದಿನ ಭವಿಷ್ಯಕ್ಕೆ ಬೇಕಾದ ನೆಲೆಗಟ್ಟನ್ನು ಭದ್ರ ಮಾಡಿಕೊಳ್ಳಬೇಕು.
ಮಾರ್ಗದರ್ಶನವನ್ನು ತಜ್ಞರಿಂದ ಪಡೆಯಬೇಕು ಎಂದರು.
ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಅಂಚೆ ಚೀಟಿಗಳು, ಹಳೆ ನಾಣ್ಯಗಳು ಹಾಗೂ ಸಂಸ್ಕೃತಿ, ಇತಿಹಾಸದ ಹಿನ್ನೆಲೆಗೆ ಸಾಕ್ಷಿಯಾಗುವಂತಹ ವಸ್ತುಗಳನ್ನು ಸಂಗ್ರಹ ಮಾಡುವುದು, ಉತ್ತಮ ಪುಸ್ತಕ ಓದುವುದು ವಿದ್ಯಾರ್ಥಿಗಳ ದಿನಚರಿ ಆಗಬೇಕು ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್, ಪದಾಧಿಕಾರಿಗಳಾದ ಗೋವಿಂದರಾಜು, ಮಂಜುನಾಥ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net