ಚನ್ನಾಪುರ ಬಳಿ ಹೆದ್ದಾರಿ ತಾತ್ಕಾಲಿಕವಾಗಿ ಬಂದ್

ಬೇಲೂರು-ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ತಡೆಗೋಡೆ ಆಲೂರು ತಾಲೂಕಿನ ಚನ್ನಾಪುರದ ಬಳಿ ಕುಸಿದಿರುವುದು.
ಬೇಲೂರು-ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ತಡೆಗೋಡೆ ಆಲೂರು ತಾಲೂಕಿನ ಚನ್ನಾಪುರದ ಬಳಿ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಸಿದಿರುವ ತಡೆಗೋಡೆ ದುರಸ್ತಿ ಕಾಮಗಾರಿ ಆರಂಭ ಹಿನ್ನೆಲೆ
  • ಪರ್ಯಾಯ ಮಾರ್ಗದಲ್ಲಿ ವಾಹನಗಳು ತೆರಳಲು ಸೂಚನೆ
ಆಲೂರು: ಚನ್ನಾಪುರದ ಬಳಿ ಹೆದ್ದಾರಿ ತಡೆಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಬೈರಾಪುರ-ಚನ್ನಾಪುರ- ಮಗ್ಗೆ ಸಂಪರ್ಕಿಸುವ ರಸ್ತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಪ್ರಸಕ್ತ ವರ್ಷ ಸುರಿದ ಭಾರಿ ಮಳೆಗೆ ತಾಲೂಕಿನ ಬೇಲೂರು, ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಚನ್ನಾಪುರದ ಬಳಿ ತಡೆಗೋಡೆ ಕುಸಿದಿತ್ತು.
ಹೀಗಾಗಿ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗವಾಗಿ ವಾಹನಗಳು ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯ ಬಳಿಯ ಕಣದಹಳ್ಳಿ ವೃತ್ತದಿಂದ ಬಲ್ಲೂರು, ಬೆಟ್ಟಳ್ಳಿ ಕ್ರಾಸ್ ಮೂಲಕ ಮಗ್ಗೆ ಗ್ರಾಮವನ್ನು ತಲುಪುವಂತೆ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮುರುಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಲೂರು-ಕೊಡ್ಲಿಪೇಟೆ 49.2 ಕಿ.ಮೀ.ಉದ್ದದ ರಾಜ್ಯ ಹೆದ್ದಾರಿಯು ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದ ಬಳಿ ತಡೆಗೋಡೆ ಕುಸಿದಿತ್ತು. 33 ಲಕ್ಷ ರೂ.ವೆಚ್ಚದಲ್ಲಿ ನೂತನ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಈ ಪ್ರದೇಶ ಶೀತವಾಗಿದ್ದು ಕಾಮಗಾರಿ ನಡೆಸುವ ವೇಳೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net