ಅತ್ತಿಹಳ್ಳಿ ಕೆರೆಗೆ ಹೇಮಾವತಿ ನದಿ ನೀರು

ಅತ್ತಿಹಳ್ಳಿ ಗ್ರಾಮದ ಶುದ್ಧ ನೀರು ಘಟಕವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಹಿರಿಯಣ್ಣ ಗೌಡ, ನಾಗರಾಜ್, ಎಲ್‌ಐಸಿ ಕುಮಾರ್, ನಾಗರಾಜ್, ಅನಿತಾ ಮಹೇಶ್, ಸಂಪತ್ ಕುಮಾರ್ ಇದ್ದರು.
ಅತ್ತಿಹಳ್ಳಿ ಗ್ರಾಮದ ಶುದ್ಧ ನೀರು ಘಟಕವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಹಿರಿಯಣ್ಣ ಗೌಡ, ನಾಗರಾಜ್, ಎಲ್‌ಐಸಿ ಕುಮಾರ್, ನಾಗರಾಜ್, ಅನಿತಾ ಮಹೇಶ್, ಸಂಪತ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
ನುಗ್ಗೇಹಳ್ಳಿ: ಅತ್ತಿಹಳ್ಳಿ ಕೆರೆಗೆ ಮುಂದಿನ ಹಂಗಾಮಿನಲ್ಲಿ ಹೇಮಾವತಿ ನದಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಅತಿಹಳ್ಳಿ ಗ್ರಾಮದಲ್ಲಿ ಭಾನುವಾರ ಶುದ್ಧ ನೀರು ಘಟಕ ಉದ್ಘಾಟಿಸಿ ಅವರು ಮಾತನಾಡಿದರು. 72 ಕೋಟಿ ರೂ.ವೆಚ್ಚದಲ್ಲಿ 25 ಕೆರೆಗಳಿಗೆ ನೀರು ಹರಿಸುವ ಈ ಯೋಜನೆಯಿಂದ ನುಗ್ಗೇಹಳ್ಳಿ ಹೋಬಳಿಯ 20 ಕೆರೆಗಳಿಗೆ ಮುಂದಿನ ಹಂಗಾಮಿನಲ್ಲಿ ನೀರು ಹರಿಸಲಾಗುವುದು ಎಂದರು.
ಅರಳಾಪುರ ಗ್ರಾಮದ ಬಳಿ ಬಾಕಿ ಉಳಿದಿರುವ 900 ಮೀಟರ್ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘದ ಅಧ್ಯಕ್ಷ ಮಂಜೇಗೌಡ ಅವರ ಮನವೊಲಿಸಿ ಕಾಮಗಾರಿಗೆ ಭೂಮಿ ಬಿಡಿಸಲಾಗಿದೆ ಎಂದರು.
ಹೋಬಳಿಯ ಶೇ.90 ಎಲ್ಲ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ದಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಿರಿಯಣ್ಣಗೌಡ, ರಾಜ್ಯ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ಮುಖಂಡರಾದ ಸಂಪತ್ ಕುಮಾರ್, ನಾಗರಾಜ್, ಎಲ್‌ಐಸಿ ಕುಮಾರ್, ಎಚ್.ಕೆ.ಅಶೋಕ್, ಕೇಬಲ್ ನಾಗರಾಜ್, ಅನಿತಾ ಮಹೇಶ್, ನಾಗೇಂದ್ರ, ಲೋಕೇಶ್, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಚಂದ್ರೇಗೌಡ, ಮಂಜಚಾರ್, ಹೇಮಂತ್, ಶೇಖರ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net