ಅರಸೀಕೆರೆ: ತಾಲೂಕಿನ ವಿವಿಧೆಡೆ ಮುಂಗಾರು ಮಳೆ ಸಿಂಚವಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಜಿಟಿ ಜಿಟಿಯಾಗಿ ಸುರಿಯಲಾರಂಭಿಸಿ, ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿತ್ತು. ಕೆಲವರು ಕೊಡೆ ಮೊರೆ ಹೋಗಿದ್ದರು. ಪುನರ್ವಸು ಕೃಪೆ ತೋರಿರುವ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರ ಕೊಳ್ಳಲು ಅಂಗಡಿಗಳ ಮುಂದೆ ನಿಂತ್ತಿದ್ದ ದೃಶ್ಯ ಕಂಡುಬಂದಿತು. ಬಸ್ ನಿಲ್ದಾಣದ ಬಳಿ ರಕ್ಷಣಾ ಹೊದಿಕೆ ಇಲ್ಲದ ಕಾರಣ ಪ್ರಯಾಣಿಕರು ಬಸ್ ಹತ್ತಲು ಪರದಾಡಿದರು.