ರೈಲು ನಿಲ್ದಾಣಕ್ಕೆ ದಾರಿ ಯಾವುದಯ್ಯ?

ರೈಲ್ವೆ ಇಲಾಖೆ ಆಳವಡಿಸಿರುವ ನಾಮಫಲಕ.
ರೈಲ್ವೆ ಇಲಾಖೆ ಆಳವಡಿಸಿರುವ ನಾಮಫಲಕ.
Published on
ಸಕಲೇಶಪುರ: ರೈಲು ನಿಲ್ದಾಣಕ್ಕೆ ದಾರಿ ಯಾವುದಯ್ಯ ಎಂಬ ಪ್ರಶ್ನೆ ನಿತ್ಯ ಸಾವಿರಾರು ರೈಲ್ವೆ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.
ಹೌದು.. ಕಳೆದೊಂದು ತಿಂಗಳಿನಿಂದ ಪಟ್ಟಣದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವ ಉದ್ದೇಶದಿಂದ ಬಂದ್ ಮಾಡಿರುವ ರೈಲ್ವೆ ಅಧಿಕಾರಿಗಳು ಬದಲಿ ರಸ್ತೆಯಲ್ಲಿ ಸಂಚರಿಸಿ ಎಂಬ ನಾಮಫಲಕ ಆಳವಡಿಸಿದ್ದಾರೆ. ಆದರೆ ರೈಲ್ವೆ ನಿಲ್ದಾಣಕ್ಕೆ ತೆರಳುವ ಶೇ.80 ರಷ್ಟು ಜನರು ಅನ್ಯಪ್ರದೇಶದವರಾಗಿದ್ದು, ಬದಲಿ ರಸ್ತೆಯನ್ನು ಸೂಚಿಸದ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ತೆರಳುವ ದಾರಿಗಾಗಿ ಅನ್ಯರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಸದ್ಯ ರೈಲ್ವೆ ನಿಲ್ದಾಣಕ್ಕೆ ಪಟ್ಟಣದ ರೋಟರಿ ಶಾಲೆ ಹಾಗೂ ಪಯೋನಿಯರ್ ಶಾಲೆಗಳ ಮೂಲಕ ಸುತ್ತಿಬಳಸಿ ತೆರಳಬಹುದಾಗಿದೆ. ಎರಡು ಕಿ.ಮೀ. ದೂರು ಸುತ್ತಿ ಬರಬೇಕಿರುವ ರೋಟರಿ ಶಾಲೆಯ ರಸ್ತೆ ವಾಹನದಲ್ಲಿ ಸಂಚರಿಸಬಹುದಾಗಿದೆ. ಆದರೆ ಪಯೋನಿಯರ್ ಶಾಲೆಯ ಮೂಲಕ ಸಂಚರಿಸಲು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಾಲ್ನಡಿಗೆಯ ಮೂಲಕ ರೈಲ್ವೆ ನಿಲ್ದಾಣಕ್ಕೆ ತೆರಳಬಹುದಾಗಿದೆ. ಈ ಎರಡು ಮಾರ್ಗಗಳನ್ನು ಸೂಚಿಸ ಬಹುದಾಗಿರುವ ಇಲಾಖೆ ದಿನಿರ್ಲಕ್ಷ್ಯವಹಿಸಿರುವ ಪರಿಣಾಮ ರೈಲ್ವೆ ಪ್ರಯಾಣಿಕರು ಸಂಕಷ್ಟಪಡುವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net