ಕಾರ್ಯಕ್ರಮದಲ್ಲಿ ಟೈಮ್ಸ್ ಪುರಸ್ಕಾರದ ಸಾಧಕರಾದ ನಿವೃತ್ತ ಮುಖ್ಯಶಿಕ್ಷಕ ಈ.ಈಶ್ವರನ್, ಅನಾಥ ಶವಗಳಿಗೆ ಮುಕ್ತಿ ನೀಡುವ ಸಮಾಜಸೇವಕ ಸಿ.ಎಲ್.ದಿನೇಶ್, ಪ್ರಸೂತಿ ತಜ್ಞೆ ಡಾ. ಕೆ.ಆರ್.ಶೋಭಾರಾಣಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಪ್ರಕಾಶ್ ಬರಾಳು ಅವರನ್ನು ಈ ವೇಳೆ ಗೌರವಿಸಲಾಯಿತು. ಪ್ರಾಂಶುಪಾಲ ಕಾಲೇಜಿನ ಪ್ರಾಂಶುಪಾಲ ಎ.ಸಿ.ಸುನೀಲ್ ಕುಮಾರ್, ಶಿಕ್ಷಣ ಸಂಯೋಜಕ ಶ್ರೀಕಂಠ, ಆಡಳಿತಾಧಿಕಾರಿ ಸಂಜಯ್ ಸೇರಿದಂತೆ ಉಪನ್ಯಾಸ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.