ಬಳಿಕ ಕಸ ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ, ಇಲ್ಲಿನ ಸ್ವಚ್ಛತೆ, ಕಸ ಸಂಸ್ಕರಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಪಟ್ಟಣದ ಶ್ರೀ ಲಕ್ಷ್ಮ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ತೆರಳಿ ದೇವಾಲಯದ ಬಿರುಕುಬಿಟ್ಟ ರಕ್ಷಣಾ ಗೋಡೆಯನ್ನು ಪರಿಶೀಲಿಸಿ ಶೀಘ್ರ ದುರಸ್ತಿಪಡಿಸಿ ದೇವಾಲಯದ ಎಲ್ಲ್ಲ ಗೋಡೆಗಳಿಗೆ ಸುಣ್ಣಬಣ್ಣ ಬಳಿಸುವಂತೆ ತಹಸೀಲ್ದಾರ್ ವೈ ಎಂ.ರೇಣುಕುಮಾರ್ ಸೂಚಿಸಿದರು.