ವೀರಶೈವ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಜೆಡಿಎಸ್ ನಗರ ಘಟಕದ ಪದಾಧಿಕಾರಿಗಳ ಸಭೆಯ ಗೌರವಾಧ್ಯಕ್ಷ ಡಿ.ಇ.ಮಲ್ಲೇಗೌಡ ಮಾತನಾಡಿದರು. ಮೋಹನ್ ಕುಮಾರ್, ಭಾರತಿ ಅರುಣ್‌ಕುಮಾರ್ ಇತರರು ಇದ್ದರು.
ಬೇಲೂರು : ಜೆಡಿಎಸ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಜ.24ರಂದು ಹಾಸನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶಕ್ಕೆ ಬೇಲೂರು ಪಟ್ಟಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ನಗರ ಘಟಕದ ಗೌರವಾಧ್ಯಕ್ಷ ಡಿ.ಇ.ಮಲ್ಲೇಗೌಡ ಮಾಹಿತಿ ನೀಡಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಜೆಡಿಎಸ್ ನಗರ ಘಟಕ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ಬೆಳವಣಿಗೆಯಿಂದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಜೆಡಿಎಸ್ ಕತೆ ಮುಗಿಯಿತು ಎನ್ನುವವರಿಗೆ ಉತ್ತರ ಕೊಡುವುದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶಕ್ಕೆ ಪಟ್ಟಣದಿಂದ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕು. ಜತೆಗೆ ಈಗಾಗಲೇ ಬೇಲೂರಿನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ಬರುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಿದ್ಧತೆ ಕೈಗೊಳ್ಳಬೇಕಿರುವುದರಿಂದ ಈಗಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಬೇಕು. ಆದ್ದರಿಂದ ಸಮಾವೇಶಕ್ಕೆ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕೆರತರಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷೆ ಭಾರತಿ ಅರುಣ್‌ಕುಮಾರ್, ಪುರಸಭೆ ಸದಸ್ಯರಾದ ಜಗದೀಶ್, ಶ್ರೀನಿವಾಸ್, ಮುಖಂಡರಾದ ಮಹಮ್ಮದ್ ಫಾರೂಕ್, ಸತೀಶ್, ಅಬ್ದುಲ್ ಖಾದರ್, ನಾಗೇಶ್, ಸತೀಶ್‌ಶೆಟ್ಟಿ, ಮಂಜುನಾಥ್, ಶೇಖರ್ ಇತರರಿದ್ದರು.