ಬಾಯಲ್ಲಿ ನೀರೂರಿಸಿದ ಖಾದ್ಯಗಳು

ಅರಕಲಗೂಡು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ತೊಡಗಿರುವುದು.
ಅರಕಲಗೂಡು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ತೊಡಗಿರುವುದು.
Published on
ಅರಕಲಗೂಡು: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿದ್ದ ರುಚಿಕರ ಖಾದ್ಯಗಳು ಜನರ ಬಾಯಲ್ಲಿ ನೀರೂರಿಸಿದವು.
ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ತಾವೇ ತಯಾರಿಸಿದ ಬಗೆಬಗೆಯ ಆಹಾರ ಖಾದ್ಯ, ಪಾನಿಪುರಿ, ಗೋಬಿ, ಸಿಹಿ ತಿನಿಸುಗಳು, ರುಚಿಕರ ಆಹಾರಗಳು, ಹಣ್ಣಿನ ರಸ, ತಂಪು ಪಾನಿಯಗಳು ಜನರನ್ನು ಸೆಳೆದವು. ಎಲ್ಲ ಆಹಾರ ಖಾದ್ಯಗಳ ವ್ಯಾಪಾರ ವಿದ್ಯಾರ್ಥಿಗಳು ಚುರುಕಾಗಿ ನಡೆಸಿದ್ದು ಕಂಡುಬಂತು. ಇಷ್ಟಲ್ಲದೆ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎನ್ನುವ ಭಿತ್ತಿಪತ್ರಗಳನ್ನು ಅಳವಡಿಸಿಕೊಂಡು ವ್ಯಾಪಾರ ನಡೆಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜು ಶೆಟ್ಟಿಗೌಡ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಅನಂತರಾಜು ಮತ್ತು ಉಪನ್ಯಾಸಕರು ಇದ್ದರು. ಉಪನ್ಯಾಸಕರು ವಿದ್ಯಾರ್ಥಿಗಳ ಕೌಶಲವನ್ನು ಹುರಿದುಂಬಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net