ಸುಡ ಅಧ್ಯಕ್ಷ ಸಯ್ಯದ್ ಮುಫೀಜ್ ಪದಗ್ರಹಣ

ಸಕಲೇಶಪುರ ನಗರ ಪ್ರಾಧೀಕಾರದ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಜ್ ಅಧಿಕಾರ ಸ್ವೀಕರಿಸಿದರು.
ಸಕಲೇಶಪುರ ನಗರ ಪ್ರಾಧೀಕಾರದ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಜ್ ಅಧಿಕಾರ ಸ್ವೀಕರಿಸಿದರು.
Published on
ಸಕಲೇಶಪುರ: ಸಕಲೇಶಪುರ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸಯ್ಯದ್ ಮುಫೀಜ್ ಸೋಮವಾರ ಅಧಿಕಾರ ಸ್ವೀಕರಿಸಿದರು.
ಪುರಸಭೆ ಮಾಜಿ ಅಧ್ಯಕ್ಷರಾಗಿರುವ ಸಯ್ಯದ್ ಮುಫೀಜ್ ಇದೆ ಮೊದಲ ಬಾರಿಗೆ ರಚನೆಯಾಗಿರುವ ನಗರ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪದಗ್ರಹಣದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿ ನಿರ್ಮಿಸುವುದು ನನ್ನ ಕನಸಾಗಿದ್ದು, ಪ್ರಾಧಿಕಾರದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಯೋಜಿತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಗಮನಹರಿಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಮಾತನಾಡಿ, ಅಭಿವೃದ್ಧಿಗೆ ಪರ್ಯಾಯ ಹೆಸರು ಕಾಂಗ್ರೆಸ್. ಸಾಕಷ್ಟು ಕನಸುಗಳೊಂದಿಗೆ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಇನ್ನೂ ಮುಂದೆ ಅಭಿವೃದ್ಧಿ ಕಾಮಗಾರಿಗಾಗಿ ಜಿಲ್ಲಾ ಕೇಂದ್ರಕ್ಕೆ ಎಡತಾಕುವುದು ತಪ್ಪಲಿರುವುದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಎರಡು ವ್ಯರ್ಥವಾಗುವುದು ತಪ್ಪಲಿದೆ ಎಂದರು. ಪ್ರಾಧಿಕಾರದ ಸದಸ್ಯರಾಗಿ ಬಿ.ಡಿ.ವಿಜಯ್, ಹೊಸಕೊಪ್ಪಲು ಚರಣ್, ಬೈಕೆರೆದೇವರಾಜ್ ನೇಮಿಸಲಾಗಿದೆ. ಪದಗ್ರಹಣಕ್ಕೂ ಮುನ್ನ ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು, ಎಚ್.ಎಚ್.ಉದಯ, ಹೀತುನಾಗರ ಸೇರಿದಂತೆ ಹಲವರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net