ಕಾರ್ತಿಕ ಮಾಸದ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಈಶ್ವರಸ್ವಾಮಿ ಹಾಗೂ ಹಣೋಳದಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುವುದು. ನ.19ರಂದು ಸಂಜೆ ಶ್ರೀ ಈಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಸಹಸ್ರ ಬಿಲ್ವಾರ್ಚನೆ ನೆರವೇರಲಿದೆ. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 7.30ಕ್ಕೆ ಹೆಸರಾಂತ ಕಲಾವಿದರಾದ ಜೂ. ರಾಜ್‌ಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ. ರಾತ್ರಿ 11ರಿಂದ ಗಂಗಾಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿ ಅವರಿಗೆ ಏಕದಶಾ ರುದ್ರಾಭಿಷೇಕಾ ವಿಶೇಷ ಅಲಂಕಾರ ರಾಜೋಪಚಾರ ಪೂಜೆ ನೆರವೇರುತ್ತದೆ. ರಾತ್ರಿ 1.30ಕ್ಕೆ ನಂದಿಧ್ವಜ ಸಮೇತ ಸುವಾಸಿನಿಯರ ಆರತಿ ಮೆರವಣಿಗೆ ನಡೆಯಲಿದೆ. ನ. 20ರಂದು ಬೆಳಗಿನ ಜಾವ 3.50ಕ್ಕೆ ಶ್ರೀ ವೀರಭದ್ರಸ್ವಾಮಿ ಅವರ ಅಡ್ಡೆ, ನಂದಿಧ್ವಜ ಹಾಗೂ ಹಲಗೆ ದೇವರ ಉತ್ಸವ ನಡೆಯುವುದು. ಬೆಳಗ್ಗೆ 6ರಿಂದ 6.23ರ ಒಳಗೆ ಬ್ರಾಹ್ಮೀ ಲಗ್ನದಲ್ಲಿ ವೀರಭದ್ರ ಸ್ವಾಮಿ ಅವರ ಅಗ್ನಿಕೊಂಡೋತ್ಸವ ನೆರವೇರುತ್ತದೆ. ನಂತರ ಪ್ರಸಾದ ವಿನಿಯೋಗ ಇರುತ್ತದೆ. ಮಧ್ಯಾಹ್ನ 12.50ಕ್ಕೆ ಅಭಿಜಿನ್ ಲಗ್ನದಲ್ಲಿ ಯಗಚಿ ನದಿತೀರದಲ್ಲಿ ಗಂಗಾಪೂಜೆ ನಂತರ ನಂದಿಧ್ವಜ ಮತ್ತು ವೀರಗಾಸೆ ಕುಣಿತ ಸಮೇತ ಉತ್ಸವ ನಡೆದು ನಂತರ ದಿನ ನಿತ್ಯದಂತೆ ಪ್ರತಿದಿನ ಬೆಳಗ್ಗೆ ಸಂಜೆ ಪೂಜೆ ನೆರವೇರಿಲಿದೆ.