ಹುಂಡಿ ಹಣ ಎಣಿಕೆ, 37 ಲಕ್ಷ ರೂ. ಸಂಗ್ರಹ

ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಂಡಿ ಹಣ ಎಣಿಕೆ ಸಂದರ್ಭ ಸಿಕ್ಕ ಹಣದೊಂದಿಗೆ ಮುಜರಾಯಿ ತಹಸೀಲ್ದ್ದಾರ್ ಲತಾ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಂಡಿ ಹಣ ಎಣಿಕೆ ಸಂದರ್ಭ ಸಿಕ್ಕ ಹಣದೊಂದಿಗೆ ಮುಜರಾಯಿ ತಹಸೀಲ್ದ್ದಾರ್ ಲತಾ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
Published on
ಬೇಲೂರು :ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹಂಡಿಗಳಲ್ಲಿ 37,79,346 ರೂ. ಹಾಗೂ ಎರಡು ವಿದೇಶಿ ಕರೆನ್ಸಿಯೊಂದಿಗೆ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಸಂಗ್ರಹವಾಗಿವೆ ಎಂದು ಮುಜರಾಯಿ ತಹಸೀಲ್ದಾರ್ ಲತಾ ಮಾಹಿತಿ ನೀಡಿದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ಹುಂಡಿ ಹಣ ಎಣಿಕೆ ಸಂದರ್ಭ 36, 41,823 ರೂ. ಸಂಗ್ರಹವಾಗಿತ್ತು. ಈ ಬಾರಿ 37,79,346 ರೂ. ಕಾಣಿಕೆ ಹರಿದು ಬಂದಿದೆ. ಈ ಎಲ್ಲ ಹಣವನ್ನು ದೇವಾಲಯದ ಅಭಿವೃದ್ಧಿ ಹಾಗೂ ದೇಗುಲದಲ್ಲಿ ಕೆಲಸ ನಿರ್ವಹಿಸುವ ನೌಕರರ ವೇತನಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಭಕ್ತರು ಹಾಗೂ ಪ್ರವಾಸಿಗರು ಅವರವರ ಭಕ್ತಿಗನುಸಾರವಾಗಿ ಕಾಣಿಕೆ ರೂಪದಲ್ಲಿ ದೇಗುಲ ಮತ್ತು ದಾಸೋಹದ ಹುಂಡಿಗೆ ಹಣ, ಚಿನ್ನ ಬೆಳ್ಳಿಯನ್ನು ಹಾಕಿದ್ದಾರೆ. ಈ ಹಣವನ್ನೆಲ್ಲ ಪಟ್ಟಣದ ಸರ್ವೋದಯ ಶಾಲೆ ವಿದ್ಯಾರ್ಥಿಗಳು, ಬ್ಯಾಂಕ್‌ನ ಸಿಬ್ಬಂದಿ ಹಾಗೂ ದೇಗುಲದ ನೌಕರರ ವರ್ಗದವರು ಸೇರಿ ಎಣಿಕೆ ಮಾಡಿದ್ದಾರೆ. ಈ ಬಾರಿ 37,79,346 ರೂ. ಬಂದಿದೆ ಎಂದರು.
ಶ್ರೀ ಚನ್ನಕೇಶವಸ್ವಾಮಿ ದೇಗುಲದ ಇಒ ಯೋಗೇಶ್, ಬ್ಯಾಂಕ್ ಸಿಬ್ಬಂದಿ ಪೊಲೀಸರು, ದೇಗುಲದ ನೌಕರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net