ಹೊಳೆನರಸೀಪುರ: ತಾಲೂಕಿನ ಕಸಬಾ ಹೋಬಳಿ ಅಡಿಕೆಹೊಸೂರು ಗ್ರಾಮದ ಮಂಜುನಾಥ ಅವರ ಮನೆ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೋಮವಾರ ರಾತ್ರಿ ಒಂದೂವರೆ ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಅಡಿಕೆಹೊಸೂರು ಗ್ರಾಮದಲ್ಲಿ ಹಲವಾರು ದಿನಗಳಿಂದ ಚಿರತೆಯ ಹಾವಳಿ ಅಧಿಕವಾಗಿತ್ತು. ಸುತ್ತಮುತ್ತ ಚಿರತೆ ಆಹಾರಕ್ಕಾಗಿ ಪ್ರತಿನಿತ್ಯ ಕೋಳಿ, ನಾಯಿ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿ, ಕೊಂದು ಹಾಕುತ್ತಿತ್ತು. ಇದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ, ಕ್ರಮವಹಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ದಿಲೀಪ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಅವರು ಅರಣ್ಯಪಾಲಕ ಹೇಮಂತ ಹಾಗೂ ವಾಚರ್ ದೇವರಾಜ್, ಚಾಲಕ ರಮೇಶ್ ಜತೆ ಪರಿಶೀಲನೆ ನಡೆಸಿ, ಮಂಜುನಾಥ್ ಅವರ ಮನೆ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.