ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ
ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ರಸ್ತೆಯಲ್ಲಿರುವ ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇಗುಲದಲ್ಲಿ ಮಂಗಳವಾರ ಹನುಮದ್ ವ್ರತ ಆಚರಣೆ ಮಹೋತ್ಸವ ಜರುಗಿತು.
ಶ್ರೀ ಸೀತಾ ರಾಮಾಂಜನೇಯಸ್ವಾಮಿ ದೇಗುಲದಲ್ಲಿ ಮಂಗಳವಾರ ಬೆಳಗಿನಿಂದಲೇ ಹನುಮನಿಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಕ, ವಿವಿಧ ಅಲಂಕಾರ, ಪಂಚಾಮೃತ ಹಾಗೂ ಮಹಾ ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ಅರ್ಚಕರು ನೆರವೇರಿಸಿದರು.
ಸುಗಮ ಸಂಗೀತ ಆಯೋಜಿಸಲಾಗಿತ್ತು. ಶ್ರೀ ಸೀತಾರಾಮಾಂಜನೇಯಸ್ವಾಮಿ ಹಾಗೂ ಹನುಮದ್ ವ್ರತ ಆಚರಣೆ ಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೆ ಆರತಿ, ಹನುಮ ಚರಿತ್ರೆಯ ಪಾಠ, ಭಜನಾ ಮಂಡಳಿಗಳಿಂದ ಕೀರ್ತನ ಸೇವೆ ಹಾಗೂ ಹನುಮನ ಹೆಸರಿನ ಘೋಷಣೆಗಳನ್ನು ಕೂಗಲಾಯಿತು.