ರಾಮನಾಥಪುರದಲ್ಲಿ ಹನುಮೋತ್ಸವ ಇಂದು

ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಆಯೋಜಿಸಿರುವ ಹನುಮ ಜಯಂತ್ಯುತ್ಸವಕ್ಕೆ ರಾರಾಜಿಸುತ್ತಿರುವ ಕೇಸರಿ ಬಾವುಟಗಳು.
ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಆಯೋಜಿಸಿರುವ ಹನುಮ ಜಯಂತ್ಯುತ್ಸವಕ್ಕೆ ರಾರಾಜಿಸುತ್ತಿರುವ ಕೇಸರಿ ಬಾವುಟಗಳು.
Published on
ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಡಿ.13ರಂದು 5ನೇ ವರ್ಷದ ಅದ್ದೂರಿ ಹನುಮ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಶ್ರೀರಾಮ ಸೇನೆಯಿಂದ ಆಯೋಜಿಸಿರುವ ಮಹೋತ್ಸವಕ್ಕೆ ಸ್ಥಳೀಯರು ಮತ್ತು ಹನುಮನ ಭಕ್ತರು ಆಗಮಿಸುವುದರಿಂದ ಸಕಲ ಸಿದ್ಧತೆ ನಡೆಸಲಾಗಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ 12ಗಂಟೆಗೆ ಹನುಮ ದೇವರ ಬೃಹತ್ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಗುವುದು. ಡೋಲು ಕುಣಿತ, ಹನುಮ ಕುಣಿತ ಮತ್ತು ವಿವಿಧ ಹನುಮ ವೇಷಧಾರಿಗಳು ಭಾಗವಹಿಸಲಿದ್ದಾರೆ. ಭಕ್ತರಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಮಾಡಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net