ಹಿಂದುಳಿದ ಶೋಷಿತರು, ತಳ ಸಮುದಾಯಗಳು

ಹಿಂದುಳಿದ ಶೋಷಿತರು, ತಳ ಸಮುದಾಯಗಳು
ಹಿಂದುಳಿದ ಶೋಷಿತರು, ತಳ ಸಮುದಾಯಗಳು
Published on

ಪ್ರಮುಖ ಮುಖ್ಯಾಂಶಗಳು

  • Backward, exploited, lower communities
ಬೇಲೂರು : ಆಳುವ ಸರ್ಕಾರಗಳು ಶೋಷಿತರ, ತಳ ಸಮುದಾಯ ಹಾಗೂ ವಂಚಿತರ ಪರ ಎನ್ನುತ್ತಾರೆ. ಆದರೆ ಇನ್ನೂ ಅಲೆಮಾರಿ ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವುದು ವಿಪರ್ಯಾಸ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಹೇಳಿದರು.
ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಲೆಮಾರಿಗಳ ಸಾಮಾಜಿಕ ಮತ್ತು ರಾಜಕೀಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು 79 ವರ್ಷಗಳೇ ಕಳೆದರೂ ಅಲೆಮಾರಿ ಹಂದಿ ಜೋಗಿಗಳ ಬದುಕು ಹಸನಾಗಿಲ್ಲ. ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹಕ್ಕು ಹಾಗೂ ಸಾಮಾನ ಅವಕಾಶಗಳನ್ನು ಕಲ್ಪಿಸಿ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಆದರೆ ನಮ್ಮನ್ನಾಳುವ ಸರ್ಕಾರಗಳು, ಜನಪ್ರತಿನಿಧಿಗಳು ಮಾತ್ರ ಮತಕ್ಕಾಗಿ ಬಳಸಿಕೊಂಡು ನಂತರ ಕಾಲ ಕಸದಂತೆ ಮಾಡುತ್ತಿದ್ದಾರೆ. ಆದ್ದರಿಂದ ಈ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕಿದೆ. ಎಂದರು.
ತಿಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 30ಕ್ಕೂ ಮನೆಗಳಿದ್ದರೂ ಸರ್ಕಾರದ ಮೂಲಸೌಲಭ್ಯ ಮರೀಚಿಕೆಯಾಗಿದೆ. ಗ್ರಾಮದಲ್ಲಿ ನೂರಾರು ಜನರಿದ್ದರೂ ಇಲ್ಲಿವರೆಗೂ ರಾಜಕೀಯವಾಗಿ ಅಧಿಕಾರದ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಅವರಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿ ತುಂಬಿದಾಗ ಮಾತ್ರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ. ಅಲೆಮಾರಿ ಹಂದಿಜೋಗಿ ಸಮುದಾಯದ ಯುವಕರು ಸಂಘಟಿತರಾಗಿ ಸಮುದಾಯದ ಏಳಿಗೆಗೆ ಮುಂದಾಗಬೇಕಿದೆ ಎಂದರು.
ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಹುಳಿಯಾರು ರಾಜಪ್ಪ ಮಾತನಾಡಿ, ಅಲೆಮಾರಿಗಳಾದ ನಾವುಗಳು ಎಚ್ಚೆತ್ತುಕೊಳ್ಳದಿದ್ದರೆ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ. ಮೊದಲು ಸಮುದಾಯ ಸಂಘಟಿತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗಬೇಕಿದೆ. ವಿದ್ಯಾವಂತರಾದರೆ ಮಾತ್ರ ನಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಮತ್ತು ನಮ್ಮ ಕುಲ ಕಸುಬಿನೊಂದಿಗೆ ಆರ್ಥೀಕವಾಗಿ ಸದೃಢರಾದಾಗ ಮಾತ್ರ ಎಲ್ಲರೂ ನಮ್ಮತ್ತ ಕಣ್ಣು ಹಾಯಿಸುತ್ತಾರೆ. ಇಲ್ಲದಿದ್ದಲ್ಲಿ ಕಡೆಗಾಣಿಸುತ್ತಾರೆ. ಆದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಮೊದಲು ಶಿಕ್ಷಣ ಪಡೆದು ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದರು. ಬಿಎಸ್‌ಪಿ ತಾಲೂಕು ಸಂಯೋಜಕ ಉಮೇಶ್, ಗ್ರಾಮದ ಮುಖಂಡರಾದ ಪೆದ್ದಯ್ಯ, ಶಿಕ್ಷಕ ಯಲ್ಲಪ್ಪ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net