ಜ್ಞಾನಶ್ರೀ ಎಕ್ಸ್‌ಪರ್ಟ್ ಕ್ರೀಡಾಪಟುಗಳಿಗೆ ಪ್ರಶಸ್ತಿ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಬಿ.ಕುಡವಕ್ಕಲಗಿ, ಅರುಣ್ ಕುಮಾರ್, ತೀರ್ಥ ಪ್ರಸಾದ್, ಜಯಣ್ಣ, ಉಮೇಶ್, ವಿಜಯ ಕುಮಾರ್ ಇದ್ದರು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಬಿ.ಕುಡವಕ್ಕಲಗಿ, ಅರುಣ್ ಕುಮಾರ್, ತೀರ್ಥ ಪ್ರಸಾದ್, ಜಯಣ್ಣ, ಉಮೇಶ್, ವಿಜಯ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

ಅರಸೀಕೆರೆ :

ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಕ್ರೀಡಾಪಟುಗಳು ಸಮಗ್ರ ಚಾಂಪಿಯನ್ ಷಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಸಂಗೀತಾ 100 ಮೀ. ಹಾಗೂ ಉದ್ದ ಜಿಗಿತ ಪ್ರಥಮ, ಚಿತ್ರಾ 100 ಮೀ.ನಲ್ಲಿ ತೃತೀಯ ಹಾಗೂ 3000 ಮೀ. ದ್ವಿತೀಯ, ಯಶಸ್ವಿನಿ 200 ಹಾಗೂ 800 ಮೀ. ಪ್ರಥಮ, ಸುಮಯಾ ಭಾನು 400 ಮೀ. ಹಾಗೂ 3000 ಮೀ. ಪ್ರಥಮ, ಜ್ಯೋತಿ 1500 ಮೀ. ದ್ವಿತೀಯ, ಕಲ್ಪನಾ ಬಾಯಿ 1500 ಮೀ. ಪ್ರಥಮ, ಕವನಾ ಗುಂಡು ಎಸೆತ ದ್ವಿತೀಯ, ಸಿಂಚನಾ ಬಿ.ಜೆ ಹ್ಯಾಮರ್ ಗುಂಡು ಎಸೆತ ದ್ವಿತೀಯ, ಮೌಲ್ಯಾ ಎತ್ತರ ಜಿಗಿತ ತೃತೀಯ ಹಾಗೂ ಬಾಲಕಿಯರ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ಗುಂಪು ಆಟಗಳಲ್ಲಿ ಕಬಡ್ಡಿ, ಖೋ ಖೋ, ಹಾಗೂ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ ಲಭಿಸಿದೆ. ಬಾಲಕಿಯರ ವೈಯಕ್ತಿಕ ಸಮಗ್ರ ಪ್ರಶಸ್ತಿ ಯಶಸ್ವಿನಿ ಪಡೆದು ಕೊಂಡಿರುತ್ತಾರೆ.
ಬಾಲಕರ ವಿಭಾಗದಲ್ಲಿ ಭರತ್ 800 ಮೀ. ದ್ವಿತೀಯ, 1500 ಹಾಗೂ 3000 ಮೀ. ಪ್ರಥಮ,
ರಿಷಿ 3000 ಮೀ. ತೃತೀಯ, ಸಂದೇಶ್ 400 ಮೀ. ದ್ವಿತೀಯ, ಸುಜನ್ ಜಾವಲಿನ್ ಗುಂಡು ಎಸೆತ ತೃತೀಯ, 4400 ರೀಲೆ ಪ್ರಥಮ , ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಪಟುಗಳಿಗೆ ಯಳನಡು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷ ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಬಿಎಡ್ ಕಾಲೇಜು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಬಿ.ಕುಡವಕ್ಕಲಗಿ, ಕಾಲೇಜಿನ ಆಡಳಿತಾಧಿಕಾರಿ ಅರುಣ್ ಕುಮಾರ್, ಪ್ರಾಂಶುಪಾಲ ತೀರ್ಥ ಪ್ರಸಾದ್ ಸೇರಿದಂತೆ ಉಪನ್ಯಾಸಕರು ಸಿಬ್ಬಂದಿ ಪ್ರಶಸ್ತಿ ಪ್ರದಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net