ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯ

ಗಂಡಸಿಯ ಶ್ರೀ ಶಂಭುಲಿಂಗೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಡಿ.ಟಿ.ರಂಗಸ್ವಾಮಿ, ಜಿ.ರವೀಶ್, ಮಲ್ಲಿಕಾರ್ಜುನ
ಗಂಡಸಿಯ ಶ್ರೀ ಶಂಭುಲಿಂಗೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಡಿ.ಟಿ.ರಂಗಸ್ವಾಮಿ, ಜಿ.ರವೀಶ್, ಮಲ್ಲಿಕಾರ್ಜುನ
Published on
ಗಂಡಸಿ: ಕುಟುಂಬ ಮತ್ತು ಸಮಾಜ ಎರಡನ್ನು ಸಮತೋಲನದಲ್ಲಿ ನಡೆಸುವ ಸಾಮರ್ಥ್ಯ ಮಹಿಳೆಯರಲ್ಲಿದ್ದು, ಸಮಾಜದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಿರುವ ಸ್ತ್ರೀಯರನ್ನು ಗೌರವಿಸಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಡಿ.ಟಿ.ರಂಗಸ್ವಾಮಿ ಹೇಳಿದರು.
ಅರಸೀಕೆರೆ ತಾಲೂಕು ಗಂಡಸಿ ಶ್ರೀ ಶಂಭುಲಿಂಗೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ 1990ನೇ ಸಾಲಿನ ಪಿಯು ವಿಭಾಗದ ಹಿರಿಯ ವಿದ್ಯಾರ್ಥಿನಿಯರು ಮಂಗಳವಾರ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಗುರುವಂದನೆ ಮತ್ತು ಹಿರಿಯ ವಿದ್ಯಾರ್ಥಿನಿಯರ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಂಭುಲಿಂಗೇಶ್ವರ ಪದವಿ ಪೂರ್ವ ಮಹಿಳಾ ಕಾಲೇಜು 1990ರಲ್ಲಿ ಪ್ರಾರಂಭವಾದಾಗ ನಾನು ಪ್ರಾಂಶುಪಾಲನಾಗಿದ್ದೆ. ಎಜುಕೇಷನ್ ಪಿಯುಸಿ ವಿಭಾಗಕ್ಕೆ 60 ವಿದ್ಯಾರ್ಥಿನಿಯರು ದಾಖಲಾಗಿದ್ದರು. ಈ ಪೈಕಿ 60 ವಿದ್ಯಾರ್ಥಿನಿಯರು ಶಿಕ್ಷಕಿಯರಾಗಿ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಾಲೇಜಿನ ಹೆಮ್ಮೆಯ ಸಂಗತಿ ಎಂದರು.
ಶಿಕ್ಷಕ ವೃತ್ತಿ ಬೇರೆಲ್ಲ ವೃತ್ತಿಗಳಿಗಿಂತ ಪಾವಿತ್ರೃದಿಂದ ಕೂಡಿದ್ದು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರವು ಭಾರಿ ಪೈಪೋಟಿಗೆ ಇಳಿದಿದೆ. ಭವ್ಯ ಭಾರತದ ಕನಸು ಶ್ರೀಮಂತಗೊಳಿಸುವ ಬಗ್ಗೆ ಚಿಂತಿಸುವ ಅಗತ್ಯತೆ ಇದ್ದು ದೇಶ ಸಮಗ್ರ ಅಭಿವೃದ್ಧಿ ಕಾಣಲು ಭವ್ಯ ಭಾರತದ ಪ್ರಜೆಗಳಾದ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಶಿಕ್ಷಕರು ಪ್ರತಿ ದಿನ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿದರೆ ಸಾಲದು, ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಪ್ರೀತಿ, ಗೌರವ, ಪ್ರಾಮಾಣಿಕತೆ, ಪರಿಸರ ಕಾಳಜಿಯ ಬಗ್ಗೆ ತಿಳಿಸಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಡಿ.ಟಿ.ರಂಗಸ್ವಾಮಿ, ಜಿ.ರವೀಶ್, ಮಲ್ಲಿಕಾರ್ಜುನಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿನಿಯರಾದ ಜಿ.ವಿ.ಸುಜಾತಾ, ಸಿ.ಎನ್.ಶೋಭಾ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net