ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ 25ನೇ ವರ್ಷದ ಶ್ರೀ ಗುರು ಶನೈಶ್ಚರಸ್ವಾಮಿ ಜಾತ್ರಾ ಮಹೋತ್ಸವವು ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಶ್ರೀ ಗುರು ಶನೈಶ್ಚರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಅರ್ಚಕ ವೀರೂಪಾಕ್ಷ ಸ್ವಾಮಿಯವರ ನೇತೃತ್ವದಲ್ಲಿ ಪ್ರಥಮ ಗಣಪತಿ ಉದ್ಭವ ಪೂಜೆ, ಗಂಗಾ ಪೂಜೆ, ಸ್ವಾಮಿಗೆ ಮಹಾ ರುದ್ರಾಭಿಷೇಕ ಮತ್ತು ಹೂವಿನ ಅಲಂಕಾರ ನೆರವೇರಿಸಲಾಯಿತು. ಜಾತ್ರೋತ್ಸವದ ದಿನದಂದು ಮಹಾ ಕೊಂಡೋತ್ಸವ ಹಾಗೂ ಮಹಾಮಂಗಳಾರತಿ ನಡೆಯಿತು. ರಾತ್ರಿ ಹರಿಕಥೆ ಆಯೋಜಿಸಲಾಗಿತ್ತು. ಪೂಜೋತ್ಸವಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಶ್ರೀ ಗುರು ಶನೈಶ್ಚರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೀರೂಪಾಕ್ಷಸ್ವಾಮಿ ಮಾತನಾಡಿ, ಮುಂಬರುವ ದಿನಗಳಲ್ಲಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಭಕ್ತರು ತನು, ಮನ, ಧನ ಸಹಾಯ ಮಾಡಿ ದೇವಾಸ್ಥಾನದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕಾರ ಮಾಡಬೇಕೆಂದು ವಿನಂತಿಸಿದರು.
ಶ್ರೀ ಗುರು ಶನೈಶ್ಚರಸ್ವಾಮಿ ಜಾತ್ರ ಮಹೋತ್ಸವದಲ್ಲಿ ಮಲ್ಲಾಪು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಇದೇ ಸಂದರ್ಭ ಬೇಲೂರಿನ ಕುಮಾರ್ ಚಂದನ್ ಭಕ್ತಿ ಪ್ರಧಾನ ಗೀತೆಗಳನ್ನು ಹಾಡಿದರು.