ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಡಾ. ಮಂಜುನಾಥ ನಗರದಲ್ಲಿರುವ ಶಿರಡಿ ಸಾಯಿ ಮಂದಿರದಲ್ಲಿ ಸಾಯಿಬಾಬಾ ಅವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಾಸಕ ಸಿ.ಎನ್. ಬಾಲಕೃಷ್ಣ, ಚಂದ್ರಶೇಖರ ಗುರೂಜಿ, ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಟಿಎಪಿಸಿ ಎಂಎಸ್ ನಿರ್ದೇಶಕ ಅನಿಲ್ ಮರಗೂರು ಇತರರು ದರ್ಶನ ಪಡೆದರು.
Published on:
29 Jul 2026, 1:57 pm
ಚನ್ನರಾಯಪಟ್ಟಣ : ಪಟ್ಟಣದ ಡಾ.ಮಂಜುನಾಥ ನಗರದಲ್ಲಿರುವ ಶಿರಡಿ ಸಾಯಿ ಮಂದಿರದಲ್ಲಿ
ಗುರು ಪೂರ್ಣಿಮೆ ಅಂಗವಾಗಿ ಬುಧವಾರ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿತು.
ಸಾಯಿಬಾಬಾ ಮೂರ್ತಿಗೆ ಬೆಳ್ಳಿ , ಕಿರೀಟ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಮಂಗಳಾರತಿ ಮಾಡುವ ಸಂದರ್ಭದಲ್ಲಿ ಸಾಯಿಬಾಬಾ ಕುರಿತಾದ ಗೀತೆಗಳು ಅನುರಣಿಸಿದವು.
ಮುಂಜಾನೆ ಬಾಬಾ ಅವರಿಗೆ ಕಾಕಡ ಆರತಿ, ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು.
ಸಂಜೆ ಧೂಪಾರತಿ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಪಟ್ಟಣದ ವಿವಿಧ ಮಹಿಳಾ ಭಜನಾ ಮಂಡಳಿಗಳು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಗಾಯನ ಸೇವೆ
ಸಮರ್ಪಿಸಿದ್ದು, ನೂತನ್ ವಾದ್ಯ ವೃಂದದವರಿಂದ ವಿಶೇಷ ಸಂಗೀತ ಗೋಷ್ಠಿ ಗಮನ ಸೆಳೆಯಿತು.
ಸುಧೀರ್ ಶರ್ಮಾ ಮತ್ತು ತಂಡದವರು ಹೋಮ ಮತ್ತು ಪೂಜೆ ನೆರವೇರಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ, ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ,
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಟಿಎಪಿಸಿ ಎಂಎಸ್ ನಿರ್ದೇಶಕ ಅನಿಲ್ ಮರಗೂರು, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ