ಅಜ್ಞಾನದಿಂದ ಸುಜ್ಞಾನದತ್ತ ಒಯ್ಯುವ ಶಕ್ತಿಯೇ ಗುರು

ಮಾರಗೊಂಡನಹಳ್ಳಿಯ ಚಿದಾನಂದ ಆಶ್ರಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ, ಡಾ.ವೆಂಕಟೇಶ್, ಮಂಜುನಾಥ ಶಾಸ್ತ್ರಿ ಇತರರು ಇದ್ದರು.
ಮಾರಗೊಂಡನಹಳ್ಳಿಯ ಚಿದಾನಂದ ಆಶ್ರಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ, ಡಾ.ವೆಂಕಟೇಶ್, ಮಂಜುನಾಥ ಶಾಸ್ತ್ರಿ ಇತರರು ಇದ್ದರು.
Published on

ಅರಸೀಕೆರೆ ಗ್ರಾಮಾಂತರ:

ತಾಲೂಕಿನ ಬಾಣಾವರ ಹೋಬಳಿಯ ಮಾರಗೊಂಡನಹಳ್ಳಿಯ ಶ್ರೀ ಸಿದ್ಧ ಪುರುಷ ಮುಕುಂದೂರು ಬಸವಲಿಂಗ ಶಿವಯೋಗಿಗಳ ವಿರಕ್ತಮಠ ಚಿದಾನಂದಾಶ್ರಮದಲ್ಲಿ ಗುರುಪೂರ್ಣಿಮೆ, ಹಡಪದ ಅಪ್ಪಣ್ಣ ಹಾಗೂ ಮೇದಾರ ಕೇತಯ್ಯ ಅವರ ಜಯಂತಿ ಅಂಗವಾಗಿ ಮಾಸಿಕ ಶಿವಾನುಭವ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀಮಠದ ಪೀಠಾಧಿಪತಿ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಅಜ್ಞಾನದ ಅಂಧಕಾರ ದೂರ ಮಾಡಿ ಸುಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಶಕ್ತಿಯೇ ಗುರು ಎಂದರು.
ಪ್ರತಿಯೊಬ್ಬರ ಜೀವನದಲ್ಲೂ ಮುಂದೆ ಗುರಿ, ಹಿಂದೆ ಗುರು ಇದ್ದರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. 12ನೇ ಶತಮಾನದ ಬಸವಾದಿ ಶಿವಶರಣರು ಗುರುಲಿಂಗಜಂಗಮ ತತ್ವದ ಮೂಲಕ ಸಮಾಜವನ್ನು ಧರ್ಮ, ಸಮಾನತೆ ಹಾಗೂ ಮಾನವೀಯತೆಯ ಮಾರ್ಗದಲ್ಲಿ ಮುನ್ನಡೆಸಿದರು ಎಂದು ತಿಳಿಸಿದರು.
ಶರಣ ಮಲ್ಲಿಕಾರ್ಜುನಪ್ಪ ಕಾಮನಹಳ್ಳಿ, ಗುರುಪೂರ್ಣಿಮೆಯ ಮಹತ್ವ ವಿವರಿಸಿದರು. ವೈದ್ಯ ಡಾ.ವೆಂಕಟೇಶ್, ನಾಗಮಂಗಲದ ಶರಣ ಮಂಜುನಾಥ ಶಾಸ್ತ್ರಿ ಮಾತನಾಡಿದರು.
ಮುಕುಂದೂರು ಬಸವಲಿಂಗ ಶಿವಯೋಗಿಗಳ ಭಜನಾ ಸಂಘ, ಕಾಮನಹಳ್ಳಿ ಹಾಗೂ ಕೊಳಗುಂದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಅಪಾರ ಸಂಖ್ಯೆಯ ಶರಣರು ಹಾಗೂ ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net