ಅಂಗವಿಕಲರಿಗೆ ತಲುಪುತ್ತಿಲ್ಲ ಸರ್ಕಾರಿ ಸೌಲಭ್ಯಗಳು

ಬೇಲೂರು ಪಟ್ಟಣದ ಸರ್ಕಾರಿ ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಂ.ದಯಾನಂದ್, ಕೆ.ಆರ್. ಅನುಪಮಾ, ಉಷಾ ಸತೀಶ್, ಮಂಜೇಗೌಡ, ತಿಮ್ಮೇಶ್ ಇತರರಿದ್ದರು.
ಬೇಲೂರು ಪಟ್ಟಣದ ಸರ್ಕಾರಿ ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಂ.ದಯಾನಂದ್, ಕೆ.ಆರ್. ಅನುಪಮಾ, ಉಷಾ ಸತೀಶ್, ಮಂಜೇಗೌಡ, ತಿಮ್ಮೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್ ಹೇಳಿಕೆ
ಬೇಲೂರು : ಅಂಗವಿಕಲರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬರುತಿದ್ಸು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಸೌಲಭ್ಯಗಳು ನೇರವಾಗಿ ಅರ್ಹರಿಗೆ ಸಿಗುವಂತಾದಾಗ ಮಾತ್ರ ಅಂಗವಿಕಲರ ಅಬ್ಯುದಯ ಸಾಧ್ಯ ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್ ಹೇಳಿದರು. 
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದಿವ್ಯಾಂಗ ಚೇತನರ ಗೆಳೆಯರ ಬಳಗ ಹಾಗೂ ಎಂಆರ್‌ಡಬ್ಲು, ಯುಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರು.
ಸರ್ಕಾರದಿಂದ ಅಂಗವಿಕಲರಿಗೆ ಮೀಸಲಾದ ಅನುದಾನ, ಸೌಲಭ್ಯಗಳು ಜಿಲ್ಲ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭೆಗಳಿಗೆ ಬಂದ ಸಂದರ್ಭ ಅದನ್ನು ಬೇರೆ ಉದ್ದೇಶಕ್ಕೆ ಬಳಸದೆ ಅಂಗವಿಕಲರ ಅಭಿವೃದ್ಧಿಗೆ ಬಳಸಬೇಕು. ಪ್ರತಿ ತಿಂಗಳು ತಪ್ಪದೆ ಅಂಗವಿಕಲರಿಗೆ ಮಾಶಾಸನ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಪುರಸಭೆಯಿಂದ ಅಂಗವಿಕಲರ ಸಂಘಕ್ಕೆ ನಿವೇಶನ ಕೊಟ್ಟರೆ ಇಂತಹ ಕಾರ್ಯಕ್ರಮಗಳು ಮತ್ತು ತಮ್ಮ ಸಮಸ್ಯೆಗಳ ನಿವಾರಣೆಗೆ ಅನುಕೂಲವಾಗುತ್ತದೆ. ಮತ್ತು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಸಾಪ ಮಾಜಿ ಅಧ್ಯಕ್ಷರಾದ ಮಾ.ಶಿವಮೂತಿರವರ ತಂಡದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ. ಶಿವರಾಜ್ ಮಾತನಾಡಿ, ಅಂಗವಿಕಲರಿಗೆ ಅನುಕಂಪಕ್ಕಿಂತ ಸಾಧ್ಯವಾದಷ್ಟು ಅವಕಾಶಗಳನ್ನು ನೀಡಿ ಮನೋಸ್ಥೈರ್ಯ ತುಂಬಬೇಕು. ಅಂಗವಿಕಲರು ಯಾರಿಗೂ ಕಮ್ಮಿ ಇಲ್ಲದಂತೆ ಸಾಧನೆ ಮಾಡುತ್ತಿರುವುದು ನಮ್ಮ ಮುಂದೆ ಇದೆ. ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಲು ಸಾಧ್ಯವಿಲ್ಲ. ಅಂತವರಿಗೆ ಆಧ್ಯತೆ ಮೇಲೆ ಕೆಲಸ ಮಾಡಬೇಕು. ಸರ್ಕಾರದಿಂದ ಅನುದಾನ ಸಿಗದವರಿಗೆ ಅಧಿಕಾರಿಗಳು ಸಹಕಾರ ನೀಡಬೇಕು. ಶೀಘ್ರವೇ ಪುರಸಭೆಯಿಂದ ನಿವೇಶನ ನೀಡಿದರೆ ಅನುಕೂಲವಾಗುತ್ತದೆ ಎಂದರು. 
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಧಿಕಾರಿ ಕೆ.ಆರ್. ಅನುಪಮಾ ಮಾತನಾಡಿ, ಯಾವುದೇ ಅಂಗವಿಕಲರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಮ್ಮ ಸಿಬ್ಬಂದಿ ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಂಗವಿಕಲರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಅಂಗವಿಕಲರ ಅಭಿವೃದ್ಧಿ ಹಾಗೂ ಅವಶ್ಯಕತೆಗಾಗಿ ಜಿಲ್ಲೆ, ತಾಲೂಕು ಮತ್ತು ಪ್ರತಿ ಗ್ತಾಮ ಪಂಚಾಯಿತಿಗಳಲ್ಲೂ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅವರಿಗೆ ಅಂಗವಿಕರು ತಮ್ಮ ಅರ್ಜಿ ಕೊಟ್ಟಲ್ಲಿ ಅವರು ಕೆಲಸಗಳನ್ನು ಮಾಡಿ ಕೊಡಲಿದ್ದಾರೆ. ಮತ್ತು ಗುರಿಗೆ ಅನುಗುಣವಾಗಿ ಫಲಾನುಭವಿಗಳಿಗೆ ಸೌಲಭ್ಯ ಕೊಡಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಕಸಾಪ ತಾಲೂಕು ಅಧ್ಯಕ್ಷ ಮಂಜೇಗೌಡ, ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ತಿಮ್ಮೇಶ್, ತಾಲೂಕು ದಿವ್ಯಾಂಗ ಚೇತನರ ಗೆಳೆಯರ ಬಳಗದ ಅಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಗಿರೀಶ್, ಎಂಆರ್‌ಡಬ್ಕ್ಯೂ ಅಧಿಕಾರಿ ತಾಹೀರಾ, ಮ ಶಿವಮೂರ್ತಿ, ಸಾಹಿತಿ ಮಧುಮಾಲತಿ, ರವೀಂದ್ರ, ರಾಜಶೇಖರಪ್ಪ, ಕುಮಾರಸ್ವಾಮಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net