ಸಕಲೇಶಪುರ: ಅಂತ್ಯಸಂಸ್ಕಾರ ಗೌರವಯುತವಾಗಿ ನಡೆದಾಗ ಆತ್ಮಕ್ಕೆ ಸದ್ಗತಿ ದೊರೆಯಲಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಗಿರೀಶ್ ಮಂಜುನಾಥ್ ಹೇಳಿದರು.
ಮಂಗಳವಾರ ತಾಲೂಕಿನ ಉದೇವಾರ ಗ್ರಾಮದ ರುದ್ರಭೂಮಿ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮೃತವ್ಯಕ್ತಿಯ ಆತ್ಮ ಸ್ವರ್ಗಸ್ಥಗೊಳ್ಳಲಿದೆ ಎಂಬುದು ಹಿಂದೂಗಳ ನಂಬಿಕೆ. ಇದು ನೆರವೇರಬೇಕಾದರೆ ಅಂತ್ಯಸಂಸ್ಕಾರ ಅರ್ಥಪೂರ್ಣವಾಗಿರಬೇಕು. ಇದು ಈಡೇರಬೇಕಾದರೆ ರುದ್ರಭೂಮಿಯಲ್ಲಿ ಸಕಲ ಮೂಲಸೌಕರ್ಯಗಳಿರುವುದು ಅಗತ್ಯ. ಆದ್ದರಿಂದ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ರುದ್ರಭೂಮಿಗಳನ್ನು ತಲಾ 6 ಲಕ್ಷ ರೂ. ವೆಚ್ಚದಲ್ಲಿ ಲಯನ್ಸ್ ಸಂಸ್ಥೆ ಶಾಶ್ವತ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು
ಈ ವೇಳೆ ಲಯನ್ಸ್ ಸಂಸ್ಥೆಯ ಸಂಜೀತ್ ಶೆಟ್ಟಿ, ಡಾ.ನವೀನ್ ಚಂದ್ರ ಶೆಟ್ಟಿ, ಬಸವರಾಜ್, ಜಗದೀಶ್, ಕೃಷ್ಣಪ್ಪ ಮುಂತಾದವರಿದ್ದರು.