ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಗತ್ಯ

ಅಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಲೇಖನ ಸಾಮಗ್ರಿಯನ್ನು ಟ್ರಸ್ಟ್ ನ ನಿರ್ದೇಶಕ ದರ್ಶನ್ ವಿತರಣೆ ಮಾಡಿದರು.  ಓಂಕಾರ ಮೂರ್ತಿ, ಕವಿತಾ, ಇತರರು ಇದ್ದರು.
ಅಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಲೇಖನ ಸಾಮಗ್ರಿಯನ್ನು ಟ್ರಸ್ಟ್ ನ ನಿರ್ದೇಶಕ ದರ್ಶನ್ ವಿತರಣೆ ಮಾಡಿದರು. ಓಂಕಾರ ಮೂರ್ತಿ, ಕವಿತಾ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನುರ್ಭವ ಪ್ರತಿಷ್ಠಾನ ಟ್ರಸ್ಟ್ ನ ನಿರ್ದೇಶಕ ದರ್ಶನ್ ಹೇಳಿಕೆ
ಅರಸೀಕೆರೆ ಗ್ರಾಮಾಂತರ : ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಅಗತ್ಯ ಎಂದು ಹಾಸನ ಮನುರ್ಭವ ಪ್ರತಿಷ್ಠಾನ ಟ್ರಸ್ಟ್ ನಿರ್ದೇಶಕ ದರ್ಶನ್ ಹೇಳಿದರು.
ತಾಲೂಕಿನ ಅಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಗುರುವಾರ ತಮ್ಮ ಪ್ರತಿಷ್ಠಾನದ ವತಿಯಿಂದ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದರು.
ಶೈಕ್ಷಣಿಕ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಅವರ ಪ್ರತಿಭೆಯನ್ನು ಶಿಕ್ಷಕರು ಗುರುತಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ
ನೀಡಬೇಕು ಎಂದು ಹೇಳಿದರು.
ಟ್ರಸ್ಟ್ ಸಂಸ್ಥಾಪಕ ಸುಜಯ್ ಸೋಮೇಗೌಡ, ಶಿಕ್ಷಕಿ ಭವ್ಯಾ, ಓಂಕಾರ ಮೂರ್ತಿ, ಕವಿತಾ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net