ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ವೈದ್ಯರ ಜತೆ ಶಾಸಕ ಎಚ್.ಡಿ.ರೇವಣ್ಣಸಭೆ ನಡೆಸಿದರು. ವೈದ್ಯಾಧಿಕಾರಿ ನಾಗೇಂದ್ರ, ಡಾ.ಮಂಜುಳಾ, ಡಾ.ನಟರಾಜ್, ಡಾ. ರಮೇಶ್, ಡಾ.ವಿನಯ್, ಡಾ.ಪೂರ್ಣಿಮಾ, ಡಾ.ಕುಸುಮಾ, ಡಾ.ಅಜಯ್, ಸತ್ಯಪ್ರಕಾಶ್, ಡಾ.ಅಶ್ವತಿ, ಡಾ.ಲೋಕೇಶ್,ಡಾ.ದಿನೇಶ್ ಇತರರು ಇದ್ದರು.
ಹೊಳೆನರಸೀಪುರ:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಬೇಕೆ ಹೊರತು ಬೇರೆಡೆಗೆ ಕಳುಹಿಸಬೇಡಿ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಿ ಮಾತನಾಡಿ, ನಮ್ಮ ಆಸ್ಪತ್ರೆಗೆ ಅತ್ಯುತ್ತಮ ಆಸ್ಪತ್ರೆ ಎಂದು ಪ್ರಶಸ್ತಿ ಬಂದಿದೆ. ಈಗ ಅನೇಕರು ಹೊಸಬರು ಬಂದಿದ್ದೀರಿ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿಕೊಂಡು ಹೋಗಿ ಎಂದು ಹೇಳಿದ ಶಾಸಕರು, ವೈದ್ಯಾಧಿಕಾರಿ ನಾಗೇಂದ್ರ ಅವರಿಂದ ಮಾಹಿತಿ ಪಡೆದು ಕೊರತೆ ಇರುವ ವೈದ್ಯರು, ದಾದಿಯರು, ಸಿಬ್ಬಂದಿ ವಿವರ ಪಡೆದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ 150 ರಿಂದ 160 ಹೆರಿಗೆಗಳು ನಡೆಯುತ್ತಿದೆ. ಒಬ್ಬರೇ ಸ್ತ್ರೀ ರೋಗ ತಜ್ಞರು ಇದ್ದು ಅವರಿಗೆ ಹೆಚ್ಚು ಹೋರೆ ಆಗುತ್ತಿದೆ ಎಂದು ತಿಳಿದುಬಂದಿದೆ. ಇಬ್ಬರು ಸ್ತ್ರೀ ರೋಗ ತಜ್ಞರು ಸೇರಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ವೈದ್ಯರ ಜತೆಗೆ ಒಬ್ಬೊಬ್ಬರು ಸಿಬ್ಬಂದಿ ನೀಡಿ. ಮಹಿಳಾ ವೈದ್ಯರಿಗೆ ಮಹಿಳಾ ಸಿಬ್ಬಂದಿಯನ್ನು ಪುರುಷರಿಗೆ ಪುರುಷ ಸಿಬ್ಬಂದಿಯನ್ನು ನೀಡಿ. ಯಾವ ವೈದ್ಯರು ಯಾವ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಾರೋ ಅವರನ್ನು ನೇಮಿಸಿಕೊಳ್ಳಲಿ. ಇದನ್ನು ಅದೇಶ ಮಾಡಿ ಆದೇಶ ಪ್ರತಿಯನ್ನು ನೀಡಿ ಎಂದು ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ವೈಜ್ಞಾನಿಕವಾದ ಲಾಂಡ್ರಿ, ಅಗತ್ಯಕ್ಕೆ ತಕ್ಕ ಸಲಕರಣೆಗಳನ್ನು ಒದಗಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಭಾಂಗಣದಿಂದಲೇ ಕರೆ ಮಾಡಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾ ಅವರನ್ನು ಸನ್ಮಾನಿಸಿದರು.
ಡಾ.ನಟರಾಜ್, ಡಾ.ರಾಮು, ಡಾ.ವಿನಯ್, ಡಾ.ಪೂರ್ಣಿಮಾ, ಡಾ.ಕುಸುಮಾ, ಡಾ. ಅಜಯ್,ಡಾ.ಸತ್ಯಪ್ರಕಾಶ್, ಡಾ.ಅಶ್ವತಿ, ಡಾ.ಲೋಕೇಶ್,ಡಾ.ದಿನೇಶ್, ಡಾ.ಶ್ರೇಯಾ, ಡಾ. ಕಿರಣ್‌ಕುಮಾರ್, ಡಾ.ನಾಗಕನ್ಯ, ಡಾ.ಮುರುಗೇಶ್, ಡಾ.ಮಲ್ಲರಾಜು, ಡಾ.ಭವ್ಯಾ ಇತರರು ಇದ್ದರು.