ಮಾರಕ ರೋಗಗಳ ಮಾಹಿತಿ ಪಡೆದುಕೊಳ್ಳಿ

ಅರಕಲಗೂಡಿನಲ್ಲಿ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನ ಜನಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಕರ್ತರನ್ನು ಗೌರವಿಸಲಾಯಿತು. ಬಿ.ಕೆ. ನಾಗೇಶ್ ಮೂರ್ತಿ, ಎಂ.ಆರ್. ಗಿರೀಶ್, ಡಾ. ಪುಷ್ಪಲತಾ, ಪರಷುರಾಮ್, ಯೋಗನಾಥ್, ಗಂಗಾಧರ್ ಇತರರಿದ್ದರು.
ಅರಕಲಗೂಡಿನಲ್ಲಿ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನ ಜನಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಕರ್ತರನ್ನು ಗೌರವಿಸಲಾಯಿತು. ಬಿ.ಕೆ. ನಾಗೇಶ್ ಮೂರ್ತಿ, ಎಂ.ಆರ್. ಗಿರೀಶ್, ಡಾ. ಪುಷ್ಪಲತಾ, ಪರಷುರಾಮ್, ಯೋಗನಾಥ್, ಗಂಗಾಧರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ
  • ಸರ್ಕಾರಿ ಐಟಿಐ ತರಬೇತಿ ಸಂಸ್ಥೆ
ಅರಕಲಗೂಡು: ಮಾರಕ ರೋಗಗಳ ಬಗ್ಗೆ ಜನರು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು ಅತ್ಯಗತ್ಯ ಎಂದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ನಾಗೇಶ್ ಮೂರ್ತಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಐಟಿಐ ತರಬೇತಿ ಸಂಸ್ಥೆಯಲ್ಲಿ ಸೋಮವಾರ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನದ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಏಡ್ಸ್ ಬಗ್ಗೆ ಜಾಗೃತಿಯಿಂದ ಇದ್ದರೆ ಯಾರಿಗೂ ಈ ಕಾಯಿಲೆ ಹರಡುವುದಿಲ್ಲ. ನಮ್ಮ ವೈಯಕ್ತಿಕ ತಪ್ಪಿನಿಂದ ಕಾಯಿಲೆಯನ್ನು ತಂದುಕೊಳ್ಳಬಹುದೇ ಹೊರತು ಬೇರೆ ಯಾರಿಂದಲೂ ಈ ಕಾಯಿಲೆ ಹರಡುವುದಿಲ್ಲ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಯುವಜನತೆ ಜಾಗೃತರಾಗಿರಬೇಕು. ದೃಶ್ಯ ಮಾಧ್ಯಮಗಳ ಸೆಳೆತದಿಂದ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಪ್ರೇಮಪಾಶಕ್ಕೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಾಕಷ್ಟು ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದೆ. ಆದ್ದರಿಂದ ಯುವ ಸಮುದಾಯ ಜಾಗೃತರಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಗಿರೀಶ್ ಮಾತನಾಡಿ, ಇವತ್ತಿನ ಯುವ ಸಮುದಾಯ ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ಯೋಗ ಧ್ಯಾನ ಮಾಡುವುದು ರೇಡಿಯೋ ಕಾರ್ಯಕ್ರಮ ಕೇಳುವುದನ್ನು ಬೆಳೆಸಿಕೊಂಡರೆ ಉತ್ತಮ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ್ ಮಾತನಾಡಿ, ದೇಶದಲ್ಲಿ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಹಾಸನ ಜಿಲ್ಲೆ 13ನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಅರಕಲಗೂಡು ಐದನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 9876 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನಜಾಗೃತಿ ಸಲುವಾಗಿ ತಾಲೂಕಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಡೊಳ್ಳು ಕುಣಿತ, ತೊಗಲಗೊಂಬೆ ಆಟ. ರೆಡ್ ರಿಬ್ಬನ್ ಕ್ಲಬ್ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ, ಕಟ್ಟಡ ಕಾರ್ಮಿಕರು, ಅಡಕೆ ಕೆಲಸಗಾರರು ಕಾಫಿ ತೋಟಕ್ಕೆ ಕೆಲಸಕ್ಕೆ ಬಂದಿರುವ ಕೆಲಸಗಾರರು ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ತರಬೇತಿ ಸಂಸ್ಥೆಯ ಪ್ರಾಚಾರ್ಯರ ತೌಫಿಕ್ ಅಹಮದ್ ಮಾತನಾಡಿದರು. ಐಟಿಐ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಅಧಿಕಾರಿ ಶ್ರೀ ಯೋಗನಾಥ್, ಕಿರಿಯ ತರಬೇತಿ ಅಧಿಕಾರಿ ದೇವರಾಜ, ಪ್ರಕಾಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಎನ್‌ಸಿಡಿ ವಿಭಾಗದ ಡಾಕ್ಟರ್ ಪ್ರೀತಮ್ ಶುಶ್ರೂಷಕರಾದ ಲಲಿತ, ಉಮೇಶ್, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞಾನದ ಗೌರಮ್ಮ, ಪ್ರಕಾಶ್, ರತ್ನ ಹಾಗೂ ಐಟಿಐ ಕಾಲೇಜಿನ ಸಿಬ್ಬಂದಿ ಇದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞರಿಗೆ ಎನ್‌ಸಿಡಿ ವಿಭಾಗದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ವಿವಿಧ ಸಂಘ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net