ವೈದ್ಯರಿಗೆ ರೋಗಿಗಳೇ ದೇವರು

ಹಾಸನದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 15ನೇ ಟಿಕೋತ್ಸವ ಪದವಿ ಪ್ರದಾನ ಸವಾರಂಭವನ್ನು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ.  ಉದ್ಘಾಟಿಸಿ
ಹಾಸನದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 15ನೇ ಟಿಕೋತ್ಸವ ಪದವಿ ಪ್ರದಾನ ಸವಾರಂಭವನ್ನು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಉದ್ಘಾಟಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಉಪಕುಲಪತಿ ಡಾ.ಬಿ.ಸಿ ಭಗವಾನ್ ಅಭಿಪ್ರಾಯ
  • ಹಿಮ್ಸ್‌ನಲ್ಲಿ ಪದವಿ ಪ್ರದಾನ ಸವಾರಂಭ
ಹಾಸನ: ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಂದ ವಾತ್ರ ಕಲಿಯುವುದಿಲ್ಲ, ರೋಗಿಗಳಿಂದಲೂ ಕಲಿಯುತ್ತೀರಿ. ಆದ್ದರಿಂದ ರೋಗಿಗಳೇ ದೇವರೆಂದು ತಿಳಿದು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಬೇಕು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು.
ಹಾಸನದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 15ನೇ ಟಿಕೋತ್ಸವ ಪದವಿ ಪ್ರದಾನ ಸವಾರಂಭವನ್ನು ಉದ್ಘಾಟಿಸಿ ವಾತನಾಡಿದ ಅವರು, ವೈದ್ಯರು ನಿರಂತರವಾಗಿ ಕಲಿಯುತ್ತಲೇ ಇರಬೇಕು. ಈಗಿನ ವಿದ್ಯಾರ್ಥಿಗಳಿಗೆ ಕಲಿಯುವುದು ತುಂಬಾ ಇದೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ನಿಮ್ಮ ಪಠ್ಯಪುಸ್ತಕಗಳು ನಿಮಗೆ ಬೈಬಲ್, ಕುರಾನ್, ಭಗವದ್ಗೀತೆಯಂತೆ ಪವಿತ್ರವಾಗಿರಬೇಕು. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ (ಖಉಊಖ) ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳಲ್ಲಿ ಯೋಗ, ಧ್ಯಾನವನ್ನು ಕಡ್ಡಾಯಗೊಳಿಸುತ್ತಿದ್ದೇವೆ. ವೈದ್ಯರು ವಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ, ಪರಿಸರ ಸಂರಕ್ಷಣೆಯ ಬಗ್ಗೆ, ಮನುಷ್ಯನ ಅಂಗಾಂಗಗಳ ದಾನದ ಬಗ್ಗೆ ಜನರಲ್ಲಿ ಜಾಗತಿ ಮೂಡಿಸಬೇಕು. ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಂಡು ಆರೋಗ್ಯವಂತ ಸವಾಜ ನಿರ್ವಾಣ ವಾಡಲು ವೈದ್ಯರು ಮುಂದಾಗಬೇಕು ಎಂದರು.
ಸವಾರಂಭದಲ್ಲಿ ಹಿರಿಯವಿಜ್ಞಾನಿ ಪ್ರೊ. ಎಂ.ಕೆ. ಸೂರಪ್ಪ, ಹಾಸನ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕರಾದ ಡಾ. ಬಿ. ರಾಜಣ್ಣ, ಪ್ರಾಂಶುಪಾಲರಾದ ಡಾ. ಸಿ.ವಿ. ಕವಿತಾ, ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ವಿ.ರಾವೇಂದ್ರ ಪ್ರಸಾದ್, ಮುಖ್ಯ ಆಡಳಿತಾಧಿಕಾರಿ ರೇಖಾ, ಜಿಲ್ಲಾ ಸರ್ಜನ್ ಡಾ. ನಾಗೇಶ್ ಆರಾಧ್ಯ,
ಡಾ. ಪಿ.ಕೆ. ಚಿನ್ನವೀರಪ್ಪ, ಡಾ.ಜಿ. ಪ್ರವೀಣ್, ಡಾ.ಮನುಪ್ರಕಾಶ್, ಟಿಕೋತ್ಸವದ ಸಂಟನಾಕಾರರಾದ ಡಾ.ಎನ್.ಶ್ರೀರಂಗ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net