ಪಠ್ಯೇತರ ಚಟುವಟಿಕೆಯತ್ತಲೂ ಗಮನಹರಿಸಿ

ಸಕಲೇಶಪುರ ತಾಲೂಕಿನ ಕೌಡಹಳ್ಳಿ ಎನ್.ಕೆ ಗಣಪಯ್ಯ ರೋಟರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ  ತಾಲೂಕು ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪುಷ್ಪಾ, ರವಿಕುಮಾರ್, ವಿಜಯಶಂಕರ್, ಚಂದ್ರಶೇಖರ್, ಕುಶ್ವಂತ್, ಜಗದೀಶ್, ದೇವರಾಜು ಇತರರಿದ್ದರು.
ಸಕಲೇಶಪುರ ತಾಲೂಕಿನ ಕೌಡಹಳ್ಳಿ ಎನ್.ಕೆ ಗಣಪಯ್ಯ ರೋಟರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪುಷ್ಪಾ, ರವಿಕುಮಾರ್, ವಿಜಯಶಂಕರ್, ಚಂದ್ರಶೇಖರ್, ಕುಶ್ವಂತ್, ಜಗದೀಶ್, ದೇವರಾಜು ಇತರರಿದ್ದರು.
Published on

ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಕರೆ

ಸಕಲೇಶಪುರ: ಮಕ್ಕಳು ಪ್ರತಿಭೆ ಕೇವಲ ಓದುವುದಕ್ಕೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಯತ್ತಲೂ ಗಮನ ಹರಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಶಿಕ್ಷಣ ಸಮನ್ವಯ ಅಧಿಕಾರಿಗಳ ಕಚೇರಿ ಹಾಗೂ ಎನ್.ಕೆ.ಗಣಪಯ್ಯ ರೋಟರಿ ಶಾಲೆಯ ಸಹಯೋಗದಲ್ಲಿ ತಾಲೂಕಿನ ಕೌಡಹಳ್ಳಿ ಎನ್.ಕೆ ಗಣಪಯ್ಯ ರೋಟರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿಯು ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಪ್ರಮುಖ ವೇದಿಕೆಯಾಗಿದೆ. ವಿವಿಧ ವಿಷಯಗಳಲ್ಲಿ ಮಕ್ಕಳಿಗೆ ಪ್ರತಿಭೆ ಇರುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಇಂದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಎನ್.ಕೆ.ಗಣಪಯ್ಯ ರೋಟರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಶಾಲೆಯ ಆಡಳಿತ ಮಂಡಳಿ ನಮಗೆ ಎಲ್ಲ ರೀತಿಯ ಸಹಕಾರ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಲೆಯ ಪ್ರಾಂಶುಪಾಲ ಲೋಕೇಶ್ ಮಾತನಾಡಿ, ಕಳೆದ 37 ವರ್ಷಗಳಿಂದ ರೋಟರಿ ಟ್ರಸ್ಟ್ ಆಡಳಿತ ಮಂಡಳಿಯಿಂದ ನಮ್ಮ ಶಾಲೆಯು ವಿಶೇಷ ಮಕ್ಕಳಿಗೆ ವಿದ್ಯಾರ್ಜನೆ ಮಾಡುತ್ತ ಬಂದಿದ್ದು ಇಂದು ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಎಂದರು.
ತಾಲೂಕಿನ ವಿವಿಧೆಡೆಯಿಂದ ಬಂದಂತಹ ಮಕ್ಕಳು ಮಣ್ಣಿನಲ್ಲಿ ಮೊಸಳೆ, ಆಮೆ, ಜಿಂಕೆ, ಮೊಲ, ಲವ್ ಬರ್ಡ್ಸ್, ಮಂಜರಬಾದ್ ಕೋಟೆ, ಸೇರಿದಂತೆ ಮಾಡಿದ್ದ ವಿವಿಧ ಬಗೆಯ ಮಣ್ಣಿನ ಕಲಾ ಕೃತಿಗಳು ಗಮನ ಸೆಳೆದವು. ಅಭಿನಯ ಗೀತೆ, ಭಕ್ತಿ ಗೀತೆ ಜನಪದ ಮತ್ತು ಭಾವಗೀತೆಗಳನ್ನು ಮಕ್ಕಳು ಹಾಡಿದರು.
ರೋಟರಿ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ವಿಜಯಶಂಕರ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಣ ಇಲಾಖೆ ಕುಶ್ವಂತ್, ಜಗದೀಶ್, ದೇವರಾಜು ಮತ್ತು ರೋಟರಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net