ಬೇಲೂರು ಸ್ವಚ್ಛತೆಗೆ ಎಲ್ಲರ ಸಹಕಾರ ಅಗತ್ಯ

ಬೇಲೂರಿನಲ್ಲಿ ಸ್ವಚ್ಛತಾ ಅರಿವು ರ‌್ಯಾಲಿಗೆ ಗಣ್ಯರು ಚಾಲನೆ ನೀಡಿದರು. ಅಕ್ರಂ ಷರೀಫ್, ಬಸವರಾಜ ಸಿಗ್ಗಾವಿ ಇತರರಿದ್ದರು.
ಬೇಲೂರಿನಲ್ಲಿ ಸ್ವಚ್ಛತಾ ಅರಿವು ರ‌್ಯಾಲಿಗೆ ಗಣ್ಯರು ಚಾಲನೆ ನೀಡಿದರು. ಅಕ್ರಂ ಷರೀಫ್, ಬಸವರಾಜ ಸಿಗ್ಗಾವಿ ಇತರರಿದ್ದರು.
Published on
ಬೇಲೂರು : ಸ್ವಚ್ಛ ಭಾರತ ನಗರ 2.0 ಯೋಜನೆಯಡಿ ಪ್ಲಾಸ್ಟಿಕ್ ಬಳಕೆ ನಿಷೇಧ, ಹಸಿಕಸ ಒಣ ಕಸ, ಸ್ಯಾನಿಟರಿ ತ್ಯಾಜ್ಯ, ಮೂಲದಲ್ಲೇ ಕಸ ವಿಂಗಡಣೆ, ಹೊಸ ಘನತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ರ‌್ಯಾಲಿಗೆ ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಶುಕ್ರವಾರ ಚಾಲನೆ ನೀಡಿದರು.
ಬೇಲೂರು ಪಟ್ಟಣ ಪ್ರವಾಸಿ ತಾಣ. ಆದ್ದರಿಂದ ನಗರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಜತೆಗೆ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಹಲವಾರು ದುಷ್ಪರಿಣಾಮ ಬೀರುವುದರಿಂದ ಯಾರೂ ಪ್ಲಾಸ್ಟಿಕ್ ಬಳಸಬಾರದು. ಕಸವನ್ನು ಮನೆಯಲ್ಲಿ ನಾಲ್ಕು ವಿಧದಲ್ಲಿ ವಿಂಗಡಿಸಿ ಕೊಡುವುದು ಉತ್ತಮ ಬೆಳವಣಿಗೆಯಾಗಲಿದೆ. ಪುರಸಭೆಯಿಂದ ಈಗಾಗಲೇ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಮನೆಯಲ್ಲಿ ಸಿಗುವ ಕಸವನ್ನು ನಾಲ್ಕು ವಿಧವಾಗಿ ವಿಂಗಡಿಸಿ ಕೊಡಬೇಕು. ಪ್ರಥಮವಾಗಿ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ, ವಿಶೇಷ ಕಾಳಜಿ ತ್ಯಾಜ್ಯವನ್ನು ಮನೆಯಲ್ಲೇ ವಿಂಗಡಿಸಿ ಕೊಡುವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ವ್ಯವಸ್ಥಾಪಕಿ ಶಾರದಾ, ಸಮುದಾಯ ಸಂಘಟನಾಧಿಕಾರಿ ಶಶಿಕಲಾ, ಪುಷ್ಪಾ, ಕಂದಾಯಾಧಿಕಾರಿ ಗೋಪಿ, ಆಶ್ರಯ ಸಮಿತಿ ಸದಸ್ಯ ಇಕ್ಬಾಲ್ ಅಹಮದ್, ವಿದ್ಯಾವಿಕಾಸ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸುಜಯ್, ಮುಖಂಡರಾದ ಪರ್ವತಯ್ಯ, ವೆಂಕಟೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net