ಅಹೋರಾತ್ರಿ ಧರಣಿ ಅಂತ್ಯ

ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮತ್ತು ರೈತರು ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಕೆ.ಸಿ. ಸೌಮ್ಯಾ ಮಂಗಳವಾರ ರಾತ್ರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಯೋಗಣ್ಣ, ಬಿ.ಸಿ. ರವಿ ಇತರರಿದ್ದರು.
ಅರಕಲಗೂಡು ತಾಲೂಕು ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮತ್ತು ರೈತರು ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಕೆ.ಸಿ. ಸೌಮ್ಯಾ ಮಂಗಳವಾರ ರಾತ್ರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಯೋಗಣ್ಣ, ಬಿ.ಸಿ. ರವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆ ಆವರಣದಲ್ಲಿ ಅಡುಗೆ ತಯಾರಿಸಿ ಧರಣಿ
  • ಹೊಗೆಸೊಪ್ಪು ಬೆಲೆ ಏರಿಕೆ
  • ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರಿಂದ ಪ್ರತಿಭಟನಾನಿರತರ ಮನವಿ ಆಲಿಕೆ
ಅರಕಲಗೂಡು : ಹೊಗೆಸೊಪ್ಪು ಬೆಲೆ ಏರಿಕೆ ಮಾಡಿ ಎಲ್ಲ ಗ್ರೇಡ್ ಬೇಲ್‌ಗಳನ್ನು ಕೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯನ್ನು ಮಂಗಳವಾರ ರಾತ್ರಿ ಅಂತ್ಯಗೊಳಿಸಿದರು.
ಎರಡು ದಿನಗಳಿಂದ ಮಾರುಕಟ್ಟೆ ಆವರಣದಲ್ಲಿ ಅಡುಗೆ ತಯಾರಿಸಿ ಧರಣಿ ನಡೆಸಿದ ಕಾರ್ಯಕರ್ತರು ಮತ್ತು ರೈತರು ಹೊಗೆಸೊಪ್ಪಿಗೆ ಬೆಲೆ ಏರಿಕೆ ಮಾಡುವಂತೆ ಆಗ್ರಹಿಸಿದ್ದರು. ಭಾರತದಲ್ಲಿ ಉತ್ಪಾದಿಸಿದ ತಂಬಾಕು ಖರೀದಿಸಲು ವಿದೇಶಿ ಕಂಪನಿಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರ ತಂಬಾಕು ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಮಂಗಳವಾರ ರಾತ್ರಿ ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರು ಪ್ರತಿಭಟನಾನಿರತರ ಮನವಿ ಆಲಿಸಿದರು. ಏ. 15ರಂದು ಜಿಲ್ಲಾಧಿಕಾರಿ, ಶಾಸಕರು, ಮಂಡಳಿ ಅಧಿಕಾರಿಗಳು ಹಾಗೂ ಕಂಪನಿ ವರ್ತಕರ ಸಭೆ ನಡೆಸಿ ಬೆಲೆ ಏರಿಕೆ ಸ್ಥಿರತೆ ಕಾಪಾಡಿಕೊಂಡು ಎಲ್ಲ ಗ್ರೇಡ್‌ಗಳನ್ನು ಕೊಳ್ಳುವಂತೆ ಸೂಚಿಸಲಾಗುವುದು ಎಂದರು. ತಹಸೀಲ್ದಾರ್ ಮನವಿಗೆ ಸ್ಪಂದಿಸಿ ಪ್ರತಿಭಟನಾನಿರತರ ಧರಣಿ ಕೈಬಿಟ್ಟರು.
ಭಾರತೀಯ ಕಿಸಾನ್ ಸಂಘದ ಮಂಡ್ಯ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜ್, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಲ್ಲಪ್ಪ, ಉಪಾಧ್ಯಕ್ಷ ಸಣ್ಣೇಗೌಡ, ತಾಲೂಕು ಗೌರವಾಧ್ಯಕ್ಷ ಯೋಗಣ್ಣ, ತಾಲೂಕು ಅಧ್ಯಕ್ಷ ಬಿ.ಸಿ. ರವಿ, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಜಗನ್ನಾಥ್, ಕಾರ್ಯಾಧ್ಯಕ್ಷ ವೀರೇಂದ್ರ, ಖಜಾಂಚಿ ವೇದಾನಂದ, ಮಲ್ಲೇಶ್, ತಮ್ಮೇಗೌಡ, ರಾಮೇಗೌಡ, ಶಿವಣ್ಣ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net