ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದಲ್ಲಿ ಕೆರೆ ಏರಿ ಮತ್ತು ನಾಲೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಸದಸ್ಯ ಉದಯ್ ಕುಮಾರ್, ಮಾಜಿ ಸದಸ್ಯ ಹರೀಶ್, ಗುತ್ತಿಗೆದಾರ ಗೋಪಾಲ್, ವಾಟೆಹೋಳೆ ಅಣೆಕಟ್ಟು ಸಹಾಯಕ ಇಂಜಿನಿಯರ್ ಸಂದೀಪ್, ಗ್ರಾಮಸ್ಥರಾದ ಮಲ್ಲೇಶ್, ಕಿರಣ್, ಚಂದನ್, ಭಾರತಿ ಚಂದ್ರು, ತೀರ್ಥಭೊಜೇಶ್, ಬಸವರಾಜ್ ಇನ್ನಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಎಚ್.ಕೆ.ಸುರೇಶ್‌ರಿಂದ ಭೂಮಿ ಪೂಜೆ
ಹಗರೆ: ಪಡುವಳಲು ದೊಡ್ಡಕೆರೆ ಏರಿ ಹಾಗೂ ಕಾಲುವೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದಲ್ಲಿ ಸೋಮವಾರ ಕೆರೆ ಏರಿ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಒಂದೂವರೆ ವರ್ಷದ ಹಿಂದೆ ಈ ಗ್ರಾಮಕ್ಕೆ ಬಂದಾಗ ಮಳೆ ಹೆಚ್ಚಾಗಿ ಕೆರೆ ತುಂಬಿ ಏರಿ ಮೇಲೆ ನೀರು ಹರಿದು ಬಿರುಕು ಬಿಡುವಂತಾಗಿತ್ತು. ನಾಲೆಯಲ್ಲಿ ನೀರು ತುಂಬಿ ಜಲಾವೃತಗೊಂಡಿತ್ತು. ಅದನ್ನು ಪರಿಶೀಲಿಸಿ ಶೀಘ್ರದಲ್ಲೇ ಶಾಶ್ವತ ಪರಿಹಾರ ದೊರಕಿಸಿ ಕೊಡುವುದಾಗಿ ಮಾತು ನೀಡಿದ್ದೆ. ಅದರಂತೆ ಈ ಕೆರೆ ಏರಿ ಅಭಿವೃದ್ಧಿ ಹಾಗೂ 120 ಮೀಟರ್ ನಾಲೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ ಮತ್ತು ಗುಣಮಟ್ಟದಲ್ಲಿ ಕೆಲಸ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸದಸ್ಯ ಉದಯ್ ಕುಮಾರ್, ಮಾಜಿ ಸದಸ್ಯ ಹರೀಶ್, ಗುತ್ತಿಗೆದಾರ ಗೋಪಾಲ್, ವಾಟೆಹೋಳೆ ಅಣೆಕಟ್ಟು ಸಹಾಯಕ ಇಂಜಿನಿಯರ್ ಸಂದೀಪ್, ಗ್ರಾಮಸ್ಥರಾದ ಮಲ್ಲೇಶ್, ಕಿರಣ್, ಚಂದನ್, ಭಾರತಿ ಚಂದ್ರು, ತೀರ್ಥಭೊಜೇಶ್, ಬಸವರಾಜ್ ಇನ್ನಿತರರು ಇದ್ದರು.