ಅರಕಲಗೂಡು ತಾಲೂಕಿನ ತರಿಗಳಲೆ ಗ್ರಾಮದ ರೈತ ರಮೇಶ್ ಅವರ ತೋಟಕ್ಕೆ ಒಂಟಿ ಸಲಗ ನುಗ್ಗಿ ಮುರಿದು ಹಾಕಿದ ಅಡಿಕೆ ಮರಗಳನ್ನು ಶನಿವಾರ ಅರಣ್ಯ ಇಲಾಖೆ ನೌಕರ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ತರಿಗಳಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ರೈತ ರಮೇಶ್ ಅವರ ತೋಟಕ್ಕೆ ನುಗ್ಗಿದ ಒಂಟಿ ಸಲಗ ಅಡಿಕೆ ಮರಗಳನ್ನು ಮುರಿದು ಹಾಕಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಕಳೆದ ಕೆಲ ದಿನಗಳಿಂದ ಒಂಟಿ ಸಲಗ ರಾತ್ರಿ ವೇಳೆ ಕೃಷಿ ಪ್ರದೇಶಗಳಿಗೆ ನುಗ್ಗಿ ಬೆಳೆಗಳನ್ನು ಹಾನಿಗೊಳಿಸುತ್ತಿದ್ದು, ಹಗಲು ಹೊತ್ತಿನಲ್ಲಿ ಕೊಡಗು ಜಿಲ್ಲೆಯ ನಿಡ್ತ ಅರಣ್ಯ ಪ್ರದೇಶದಲ್ಲಿ ಬೀಡು ಬೀಡುತ್ತಿದೆ.
ಸಲಗ ದಾಳಿ ನಡೆದಿರುವ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ನೌಕರ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದ್ದು, ಗ್ರಾಮಸ್ಥರು ರಾತ್ರಿ ವೇಳೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.