ಮಕ್ಕಳ ಪ್ರೀತಿ ಗಳಿಸುವುದು ಶ್ಲಾಘನೀಯ ನಡೆ

ಹಿರಿಸಾವೆಯ ಎಸ್‌ಎನ್‌ಎಚ್‌ಸಿಎಸ್ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕ ಸಿ.ಬಿ. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಮಂಜೇಗೌಡ, ಮರುಳಾರಾಧ್ಯ, ಅಶೋಕ್ ಇತರರು ಇದ್ದರು.
ಹಿರಿಸಾವೆಯ ಎಸ್‌ಎನ್‌ಎಚ್‌ಸಿಎಸ್ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕ ಸಿ.ಬಿ. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಮಂಜೇಗೌಡ, ಮರುಳಾರಾಧ್ಯ, ಅಶೋಕ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • love of children
ಹಿರೀಸಾವೆ: ಶಿಕ್ಷಕನಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು, ಅವರ ಪ್ರೀತಿ ಗಳಿಸುವುದು ಶ್ಲಾಘನೀಯ ಕಾರ್ಯ ಎಂದು ಎಸ್‌ಎನ್‌ಎಚ್‌ಸಿಎಸ್ ಬಾಲಿಕಾ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜೇಗೌಡ ಹೇಳಿದರು.
ಪಟ್ಟಣದ ಎಸ್‌ಎನ್‌ಎಚ್‌ಸಿಎಸ್ ಬಾಲಿಕಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯಶಾಸ್ತ್ರ ಉಪನ್ಯಾಸಕ ಸಿ.ಬಿ.ರಾಮಕೃಷ್ಣ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಹಾಗೂ ಸಮಾಜದ ಪ್ರೀತಿ ಗಳಿಸುವುದು ಮಾದರಿ ನಡೆ. ಈ ರೀತಿಯ ವ್ಯಕ್ತಿತ್ವ ರಾಮಕೃಷ್ಣ ಅವರದ್ದು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ, ಶಿಸ್ತು, ಬದ್ಧತೆ ಇತರರಿಗೆ ಮಾದರಿ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ.ಬಿ. ರಾಮಕೃಷ್ಣ ಅವರು, ವೃತ್ತಿ ಜೀವನದ ಆರಂಭದಿಂದಲೇ ವಿದ್ಯಾರ್ಥಿಗಳ ಸವಾರ್ಂಗೀಣ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿದೆ. ತರಗತಿಯಲ್ಲಿ ಪಾಠ ಬೋಧನೆ ಮಾಡುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ, ಬದಲಾಗಿ ಅವರಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ ಹಾಗೂ ಆತ್ಮವಿಶ್ವಾಸವನ್ನು ತುಂಬಬೇಕು. ನಮ್ಮ ಮಕ್ಕಳು ಉತ್ತಮ ಸಾಧನೆ ಮಾಡಿದಾಗ, ಉತ್ತಮ ಸ್ಥಾನಕ್ಕೆ ಏರಿದಾಗ ನಮ್ಮ ಸೇವೆ ಸಾರ್ಥಕ ಎನ್ನಿಸಿಕೊಳ್ಳುತ್ತದೆ ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮರುಳಾರಾಧ್ಯ, ಉಪನ್ಯಾಸಕ ಅಶೋಕ್, ಪೂರ್ಣಚಂದ್ರ, ಡಾ.ಲೋಕೇಶ್, ಜ್ಯೋತಿ, ಅತಿಥಿ ಉಪನ್ಯಾಸಕರಾದ ಚೈತ್ರಾ, ಅರ್ಚನಾ, ದಾಕ್ಷಾಯಿಣಿ, ಚಂದನಾ, ಕಾವ್ಯಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net