ತಂಬಾಕಿಗೆ ಉತ್ತಮ ದರ ನೀಡುವಂತೆ ಸೂಚನೆ

ಅರಕಲಗೂಡು ತಾಲೂಕಿನ ರಾಮನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಮಂಜು ಅವರನ್ನು ಸನ್ಮಾನಿಸಲಾಯಿತು. ನಂಜುಂಡ, ಆರ್.ಎಚ್. ಕುಮಾರ್, ಜಮೀರ್ ಅಹಮದ್, ಸಿದ್ದಯ್ಯ ಇದ್ದರು.
ಅರಕಲಗೂಡು ತಾಲೂಕಿನ ರಾಮನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಪೌರಾಣಿಕ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಮಂಜು ಅವರನ್ನು ಸನ್ಮಾನಿಸಲಾಯಿತು. ನಂಜುಂಡ, ಆರ್.ಎಚ್. ಕುಮಾರ್, ಜಮೀರ್ ಅಹಮದ್, ಸಿದ್ದಯ್ಯ ಇದ್ದರು.
Published on
ಅರಕಲಗೂಡು: ತಂಬಾಕಿಗೆ ವರ್ತಕರು ಉತ್ತಮ ಬೆಲೆ ನೀಡದೆ ಅನ್ಯಾಯ ಮಾಡಿದರೆ ಹೊಗೆಸೊಪ್ಪು ಬೆಳೆ ನಿಷೇಧಿಸಿ ಸೂಕ್ತ ಪರಿಹಾರ ಒದಗಿಸುವ ಮೂಲಕ ಬೆಳೆಗಾರರ ನೆರವಿಗೆ ಬರುವಂತೆ ಮಂಡಳಿಯ ಗಮನಕ್ಕೆ ತರಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.
ತಾಲೂಕಿನ ರಾಮನಕೊಪ್ಪಲು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶನಿಪ್ರಭಾವ ಅಥವಾ ರಾಜ ವಿಕ್ರಮ ಪೌರಾಣಿಕ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬ ಕಳೆದ ನಂತರ ಮಾರುಕಟ್ಟೆಯಲ್ಲಿ ಹೊಗೆಸೊಪ್ಪು ಬೆಲೆ ಕುಸಿದು ರೈತರಿಗೆ ಮೋಸ ಮಾಡಲಾಗುತ್ತಿದೆ. ಹೀಗಾಗಿ ತಂಬಾಕು ಮಂಡಳಿ ಮತ್ತು ಕಂಪನಿಗಳ ವರ್ತಕರ ಸಭೆ ನಡೆಸಿ ಉತ್ತಮ ದರ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಬೆಲೆ ಏರಿಕೆ ಮಾಡಲಾಗದಿದ್ದರೆ ತಂಬಾಕು ಉತ್ಪಾದಿಸಲು ಲಕ್ಷಾಂತರ ರೂ.ಹಣ ವ್ಯಯಿಸಿ ಬ್ಯಾರಲ್ ಮನೆ ನಿರ್ಮಿಸಿಕೊಂಡಿರುವ ರೈತರು ನಷ್ಟಕ್ಕೊಳಗಾಗದಂತೆ ಸೂಕ್ತ ಪರಿಹಾರ ಕಲ್ಪಿಸುವಂತೆ ತಾಕೀತು ಮಾಡಲಾಗಿದೆ. ವರ್ತಕರು ಮತ್ತು ಮಂಡಳಿ ಬೆಳೆಗಾರರ ಹಿತ ಕಾಯಬೇಕು ಎಂದು ತಿಳಿಸಿದರು.
ಈ ಭಾಗದ ಹೊಗೆಸೊಪ್ಪು ಬೆಳೆಗಾರರು ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹೊಂದಿದ್ದ ಕಾರ್ಡ್‌ಗೆ ಬದಲಾಗಿ ಪರವಾನಗಿ ಕೊಡಿಸಿದ್ದೆ. ತಂಬಾಕು ಉತ್ಪಾದಿಸಿದ ನಂತರ ರೈತರಿಗೆ ಆರ್ಥಿಕವಾಗಿ ಲಾಭವಾಗಿದ್ದು ಬದಲಾವಣೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.
ಕೊಡಗಿನ ಅಳುವಾರ ಜ್ಞಾನಗಂಗೋತ್ರಿ ವಿವಿ ಉಪನ್ಯಾಸಕ ಡಾ.ಜಮೀರ್ ಅಹಮದ್, ಗ್ರಾಪಂ ಉಪಾಧ್ಯಕ್ಷ ಸಿದ್ದಯ್ಯ, ಸದಸ್ಯರಾದ ಪುಷ್ಪಾ, ಮಹದೇಶ, ಯೋಗೇಶ್, ಮುಖಂಡರಾದ ನಂಜುಂಡಸ್ವಾಮಿ, ಆರ್.ಎಚ್.ಕುಮಾರ್, ಲಾರಿ ಕುಮಾರ್, ನಾಗಣ್ಣ, ಗಂಗೂರು ಮಂಜೇಗೌಡ, ಕುಮಾರಸ್ವಾಮಿ, ಹರೀಶ್, ಕರೀಗೌಡ, ದೇವರಾಜೇಗೌಡ, ನಾಟಕ ತರಬೇತುದಾರ ಶಿಕ್ಷಕ ಟಿ.ಡಿ.ಮಧು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net