ಮಾತೃ ಭಾಷೆಯನ್ನು ಕಡೆಗಣಿಸದಿರಿ

ಹಿರೀಸಾವೆಯ ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಎಚ್.ಎ.ಪ್ರಮೋದ್, ಎ.ಜಿ.ಪ್ರಭಾಕರ್, ಹರೀಶ್, ಪ್ರಾಂಶುಪಾಲ ಸಂಜು ಇದ್ದರು.
ಹಿರೀಸಾವೆಯ ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಎಚ್.ಎ.ಪ್ರಮೋದ್, ಎ.ಜಿ.ಪ್ರಭಾಕರ್, ಹರೀಶ್, ಪ್ರಾಂಶುಪಾಲ ಸಂಜು ಇದ್ದರು.
Published on
ಹಿರೀಸಾವೆ: ಮಾತೃ ಭಾಷೆಯನ್ನು ಕಡೆಗಣಿಸಿದರೆ ದೇಶವನ್ನು ಮರೆತಂತೆಯೇ ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಚ್.ಎ.ಪ್ರಮೋದ್ ಹೇಳಿದರು.
ಪಟ್ಟಣದ ಜ್ಞಾನಪ್ರಭ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡವು ಭಾಷೆಯಷ್ಟೇ ಅಲ್ಲ ನಮ್ಮ ಬದುಕು. ವ್ಯಾವಹಾರಿಕ ಹಾಗೂ ಅಗತ್ಯ ಸ್ಥಳಗಳಲ್ಲಿ ಅನ್ಯ ಭಾಷೆಗಳ ಬಳಕೆ ಅನಿವಾರ್ಯ. ಆದರೆ ದೈನಂದಿನ ಬದುಕಿನಲ್ಲಿ ಪ್ರತಿ ಕ್ಷಣವೂ ಮಾತೃ ಭಾಷೆ ರೂಢಿಯಲ್ಲಿರಲಿ. ಕಡೆಗಣಿಸಿದರೆ ನಮಗೆ ಜನ್ಮ ನೀಡಿದ ತಾಯಿಗೆ ದ್ರೋಹ ಬಗೆದಷ್ಟೇ ಸಮ ಎಂದು ತಿಳಿಸಿದರು.
ಟೀವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ತಮ್ಮ ಮಕ್ಕಳನ್ನು ದೂರ ಇಡುವುದು ಸೂಕ್ತ. ಮೊಬೈಲ್ ಬದಲು ಮಕ್ಕಳ ಕೈಗೆ ಒಳ್ಳೆಯ ಪುಸ್ತಕ ನೀಡಿ ಓದುವ ಹವ್ಯಾಸವನ್ನು ಬೆಳೆಸುವುದು ಪಾಲಕರ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಆಧುನಿಕತೆ ಬೆಳೆದಂತೆಲ್ಲ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಕಡಿಮೆಯಾಗುತ್ತಿದೆ. ಗುರು ಹಿರಿಯರಿಗೆ ಗೌರವ ನೀಡುವ ಪದ್ಧತಿ ಕಣ್ಮರೆಗೆ ಸರಿಯುತ್ತಿದೆ. ಮಕ್ಕಳನ್ನು ಪ್ರಶ್ನಿಸುವ ಪಾಲಕರು ಇಲ್ಲದಾಗಿದೆ. ಪಾಲಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ. ಶೈಕ್ಷಣಿಕ ವ್ಯವಸ್ಥೆ ಹಾಗೂ ಮನೆಯ ವಾತಾವರಣದಲ್ಲಿ ಸಂಸ್ಕಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಎಚ್ಚರಿಸಿದರು.
ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಜಿ.ಪ್ರಭಾಕರ್ ಮಾತನಾಡಿ, ಕನ್ನಡವು ಕೇವಲ ಭಾಷೆಯಾಗಿಯೇ ಉಳಿದಿಲ್ಲ. ನಮ್ಮ ಬದುಕಿನ ಭಾಗವಾಗಿದ್ದು, ಸಂಸ್ಕೃತಿಯ ನೆಲೆಗಟ್ಟು ರೂಪಿಸಿದೆ. ಭಾಷೆಯೇ ನಮ್ಮೆಲ್ಲರ ಭಾವನೆಯಾಗಿದೆ ಎಂದರು.
ಬೇರೆ ದೇಶ ಅಥವಾ ರಾಜ್ಯಗಳಿಗೆ ತೆರಳಿ ನೆಲೆಸಿದ ಸಂದರ್ಭ ಅಲ್ಲಿಯ ಭಾಷೆ ಕಲಿಯುವುದು ಕಷ್ಟಕರ ಸಂಗತಿಯಾಗಲಿದೆ. ಆದರೆ ಇಲ್ಲಿಗೆ ಯಾರೇ ಬಂದರೂ ಸ್ವಲ್ಪ ದಿನಗಳಲ್ಲಿಯೇ ಸುಲಭವಾಗಿ ನಮ್ಮ ಭಾಷೆಯನ್ನು ಕಲಿತು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಾರೆ. ಅಲ್ಲದೆ ನಮ್ಮ ಕನ್ನಡ ಭಾಷೆಯನ್ನು ಕಲಿಯಲು ಉತ್ಸುಕರಾಗುವುದನ್ನು ಕಂಡಿದ್ದೇವೆ. ವಿಶ್ವದ ಯಾವುದೇ ಮೂಲೆಗೆ ಹೋದರೂ ಕನ್ನಡ ಭಾಷೆಗೆ ತನ್ನದೇ ಆದ ಗೌರವ ಸಿಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ನಾಡು-ನುಡಿ, ನೆಲ-ಜಲ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲ ಸಂಜಯ್ ಕ್ರಿಸ್ಟೋಫರ್, ಕಾರ್ಯದರ್ಶಿ ಹರೀಶ್, ಶಿಕ್ಷಕ ವೃಂದ, ಪಾಲಕರು ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net