ಸರ್ಕಾರಿ ಕೆಲಸದಲ್ಲಿ ಲೋಪವಾಗದಿರಲಿ

ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಹಾಸನ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಸ್.ಸುರೇಶ್ ಮಾತನಾಡಿದರು.
ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಹಾಸನ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಸ್.ಸುರೇಶ್ ಮಾತನಾಡಿದರು.
Published on
ಬೇಲೂರು: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತಡ ಮಾಡದೆ ತ್ವರಿತಗತಿಯಲ್ಲಿ ಮಾಡಿಕೊಟ್ಟಲ್ಲಿ ಜನರಿಗೆ ಅನುಕೂಲವಾಗುವುದರ ಜತೆಗೆ ಅಧಿಕಾರಿ, ಸಿಬ್ಬಂದಿಗೂ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಹಾಸನ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಸ್.ಸುರೇಶ್ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅರ್ಜಿ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಕೆಲಸ ಪವಿತ್ರವಾದ ಹುದ್ದೆ. ಅದಕ್ಕೆ ಲೋಪವಾಗದಂತೆ ಎಚ್ಚರಿಕೆ ವಹಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ದೂರುಗಳು ಲೋಕಾಯುಕ್ತಕ್ಕೆ ದಾಖಲಾಗುತ್ತಿರುವುದು ವಿಪರ್ಯಾಸದ ಸಂಗತಿ. ಗ್ರಾಪಂ, ತಾಪಂ, ಕಂದಾಯ ಇಲಾಖೆ ಹಾಗೂ ಪುರಸಭೆಯ ಕಾರ್ಯ ವೈಖರಿ ಬಗ್ಗೆಯೇ ಹೆಚ್ಚಿನ ದೂರು ದಾಖಲಾಗುತ್ತಿವೆ. ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಯ ವಸತಿ ನಿಲಯಗಳ ಬಗ್ಗೆ ದೂರು ಬರುತ್ತಿವೆ ಎಂದರು.
ಕಂದಾಯ ಇಲಾಖೆಯಲ್ಲಿ ರುದ್ರಭೂಮಿಗೆ ಸಂಬಂಧಿಸಿದಂತೆ ಸುಮಾರು 18 ಅರ್ಜಿಗಳು ಬಂದಿದ್ದು, ಅವುಗಳಿಗೆ ದೂರುದಾರರಿಂದ ಸೂಕ್ತ ಮಾಹಿತಿ ಪಡೆದು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮುಂದಿನ ತಿಂಗಳು ನಾವು ಸಭೆ ಕರೆಯುವ ಸಂದರ್ಭದಲ್ಲಿ ಇಷ್ಟು ಅರ್ಜಿಗಳಿಗೆ ಸಂಪೂರ್ಣ ಪರಿಹಾರ ದೊರಕಿರಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಬೆಳ್ಳಾವರ ಗ್ರಾಮದ ಜಗದೀಶ್ ಅವರು ಸರ್ವೇ ನಂ.59ರಲ್ಲಿ ಸರ್ಕಾರಿ ಜಾಗವಿದ್ದರು ಸಹ 400 ಜನಸಂಖ್ಯೆ ಇರುವ ನಮ್ಮ ಗ್ರಾಮಕ್ಕೆ ರುದ್ರಭೂಮಿ ಇಲ್ಲ. ಕೂಡಲೇ ಇದರ ಬಗ್ಗೆ ಗಹರಿಸುವಂತೆ ಮನವಿ ಮಾಡಿದರು.
ಅರೇಹಳ್ಳಿ ಗ್ರಾಪಂನಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅವುಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಗ್ರಾಮದ ಪಾಲಾಕ್ಷ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್, ಸಿಪಿಐ ರೇವಣ್ಣ, ಪಿಎಸ್‌ಐ ಪಾಟೀಲ್, ಬಿಇಒ ಭಾಗ್ಯಮ್ಮ, ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣೇಗೌಡ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net