ಏನಿದು ವಿವಾದ?: 2017ರಲ್ಲಿ ವಿಭಾಗಾಧಿಕಾರಿಗಳಿಂದ ಅನುಮತಿ ಪಡೆದ ಆರು ಕುಟುಂಬಗಳ ರಕ್ಷಿತ್, ಕಾರ್ತಿಕ್, ಉಮೇಶ್, ನಿಂಗರಾಜ, ನಾಗರಾಜ, ರೇವಣ್ಣ ಅರ್ಚಕ ವೃತ್ತಿ ಮಾಡುತ್ತಿದ್ದಾರೆ. ಉಳಿದ 18 ಕುಟುಂಬಗಳು ವಿಭಾಗಾಧಿಕಾರಿಯ ಅನುಮತಿಗಾಗಿ ಕಾಯುತ್ತಿದ್ದಾರೆ. ಉಮೇಶ್ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದು, ಮತ್ತೊಂದು ಬಣದ ನಟೇಶ್ ನಮ್ಮ ಕುಟುಂಬಕ್ಕೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೇಳಿದ್ದು, ಕಲಹಕ್ಕೆ ಕಾರಣವಾಗಿದೆ. ಇದರ ನಡುವೆ, ಆದರೆ, ಅನುಮತಿ ಪಡೆದವರು, ತಹಸಿಲ್ದಾರ್‌ಗೆ ದೇವಸ್ಥಾನದ ಕೀಲಿ ಕೊಡುವುದಾಗಿ ಭಕ್ತರ ಸಮ್ಮುಖದಲ್ಲಿ ವಾಗ್ವಾದ ನಡೆಸಿದ್ದಾರೆ. ಕೊನೆಗೆ ಉಮೇಶ್ ಪೂಜೆ ಸ್ಥಗಿತಗೊಳಿಸಿ ದೇವಸ್ಥಾನಕ್ಕೆ ಬೀಗ ಹಾಕಿ ಹೊರ ನಡೆದಿದ್ದಾರೆ.